ಕೊಲಂಬೊ: ಶ್ರೀಲಂಕಾದಲ್ಲಿನ ರಾಜಕೀಯ ಬಿಕ್ಕಟ್ಟಿನ ಮಧ್ಯೆ ವ್ಯಕ್ತಿಯೊಬ್ಬ ಗುಂಡಿಗೆ ಬಲಿಯಾಗಿದ್ದು, ಕ್ರಿಕೆಟ್ ದಂತಕಥೆ, ಸಚಿವ ಅರ್ಜುನ್ ರಣತುಂಗ ಅವರನ್ನು ಬಂಧಿಸಲಾಗಿದೆ.
ಭಾನುವಾರ ಶ್ರೀಲಂಕಾದ ನೂತನ ಪ್ರಧಾನಿ ಮಹಿಂದ ರಾಜಪಕ್ಷ ಬೆಂಬಲಿಗರ ಮೇಲೆ ನಡೆದ ದಾಳಿಯ ವೇಳೆ ಓರ್ವ ವ್ಯಕ್ತಿ ಮೃತಪಟ್ಟಿದ್ದ. ಈ ಹಿನ್ನೆಲೆಯಲ್ಲಿ ಲಂಕೆಯ ಮಾಜಿ ಪ್ರಧಾನಿ ರಣಿಲ್ ವಿಕ್ರಮಸಿಂಘೆ ಅವರ ಬೆಂಬಲಿಗರಾಗಿದ್ದ 54ರೆ ಹರೆಯದ ರಣತುಂಗ ಅವರನ್ನು ಬಂಧಿಸಲಾಗಿದೆ.
ರಣತುಂಗ ಕಚೇರಿ ಮುಂಭಾಗದಲ್ಲಿ ವ್ಯಕ್ತಿಯೊಬ್ಬನನ್ನು ಗುಂಡಿಕ್ಕಿ ಕೊಂದ ಹಿನ್ನೆಲೆಯಲ್ಲಿ ರಣತುಂಗ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.