News Kannada
Tuesday, November 29 2022

ದೇಶ-ವಿದೇಶ

ಸ್ಟಾರ್ ಹೋಟೆಲ್ ನಲ್ಲಿ ಊಟ ಮಾಡಿದ ಬಾಲಕರಿಬ್ಬರ ಮೃತ್ಯು - 1 min read

Photo Credit :

ಸ್ಟಾರ್ ಹೋಟೆಲ್ ನಲ್ಲಿ ಊಟ ಮಾಡಿದ ಬಾಲಕರಿಬ್ಬರ ಮೃತ್ಯು

ಕರಾಚಿ: ಇಲ್ಲಿನ ಸ್ಟಾರ್ ಹೋಟೆಲ್ ಒಂದರಲ್ಲಿ ಊಟ ಮಾಡಿದ ಮಕ್ಕಳಿಬ್ಬರು ಮೃತಪಟ್ಟು, ತಾಯಿ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆಯು ನಡೆದಿದೆ.

ಪಾಕಿಸ್ತಾನದ ಡಾನ್ ನ್ಯೂಸ್ ವರದಿ ಮಾಡಿರುವಂತೆ ಕರಾಚಿಯ ಡಿಫೆನ್ಸ್ ಹೌಸಿಂಗ್ ಅಥಾರಿಟಿ ಪ್ರದೇಶದಲ್ಲಿರುವ ಅರಿಝೊನಾ ಗ್ರಿಲ್ ರೆಸ್ಟೋರೆಂಟ್ ನಲ್ಲಿ ಈ ಕುಟುಂಬವು ಶನಿವಾರ ರಾತ್ರಿ ಊಟ ಮಾಡಿತ್ತು. ಆದರೆ ಇವರಿಗೆ ಆಹಾರ ವಿಷವಾದ ಹಿನ್ನೆಲೆಯಲ್ಲಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇದರಲ್ಲಿ ಇಬ್ಬರು ಬಾಲಕರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಘಟನೆ ಬಳಿಕ ಭಾನುವಾರ ಮಧ್ಯಾಹ್ನ ವೇಳೆ ಪೊಲೀಸರು ರೆಸ್ಟೋರೆಂಟ್ ನ್ನು ಸೀಲ್ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಈ ಮಕ್ಕಳು ಊಟದ ಬಳಿಕ ರೆಸ್ಟೋರೆಂಟ್ ಹೊರಗಡೆ ಕ್ಯಾಂಡಿ ಸೇವಿಸಿದ್ದರು. ಇದರ ಬಳಿಕ ಮನೆಗೆ ತೆರಳಿ ಹಾಲು ಸೇವನೆ ಮಾಡಿದ್ದರು. ಇದರಿಂದ ಸಾವಿಗೆ ನಿಖರ ಕಾರಣವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

See also  ನಟ ಪ್ರಭಾಸ್ ಜತೆ ವೈ ಎಸ್ ಶರ್ಮಿಳಾ ಹೆಸರು ತಳುಕು ಹಾಕಿ ಅಪಪ್ರಚಾರ ಮಾಡಿದವರ ಬಂಧನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು