ಲಂಡನ್: ಮರೆಯಲ್ಲಿ ನಿಂತ ವ್ಯಕ್ತಿಯೊಬ್ಬ ಬಾಣವೊಂದನ್ನು ಬಿಟ್ಟ ಪರಿಣಾಮವಾಗಿ ಭಾರತೀಯ ಮೂಲದ ಗರ್ಭಿಣಿಯೊಬ್ಬರು ಮೃತಪಟ್ಟು, ಅದೃಷ್ಟವಶಾತ್ ಮಗು ಬದುಕುಳಿದಿರುವ ಘಟನೆಯು ಲಂಡನ್ ನಲ್ಲಿ ನಡೆದಿದೆ.
ಸೋಮವಾರ ಲಂಡನ್ ನ ಇಲ್ ಫೋರ್ಡ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದೇವಿ ಉನ್ಮಥಾಲ್ಲೆಂಗ್ಡೊ(35) ಎಂಬವರೇ ಮೃತಪಟ್ಟ ಮಹಿಳೆ. ವರದಿಯ ಪ್ರಕಾರ 50ರ ಹರೆಯದ ರಮಾನೊಡ್ಗೆ ಉನ್ಮಥಾಲ್ಲೆಂಗ್ಡೂ ಎಂಬಾತನೇ ಬಾಣ ಪ್ರಯೋಗ ಮಾಡಿದಾತ. ಈತ ದೇವಿಯ ಮಾಜಿ ಪ್ರಿಯತಮ.
ದೇವಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಬಾಣ ಹೊಟ್ಟೆ ಸೀಳಿರುವ ಕಾರಣ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಆದರೆ ತುರ್ತು ಚಿಕಿತ್ಸೆ ಮೂಲಕ ಮಗುವನ್ನು ಉಳಿಸಿಕೊಳ್ಳಲಾಗಿದೆ ಎಂದು ವರದಿ ತಿಳಿಸಿದೆ.