ಕೊಲ್ಕತ್ತಾ: ನಿರ್ಮಾಣ ಹಂತದಲ್ಲಿದ್ದ ಸುಮಾರು 60 ಮಹಡಿಗಳ ವಸತಿ ಕಟ್ಟಡವೊಂದರಲ್ಲಿ ಬೆಂಕಿ ಅವಘಡವು ಇಂದು ಸಂಜೆ ವೇಳೆ ಕೊಲ್ಕತ್ತಾದಲ್ಲಿ ನಡೆದಿದೆ.
ನಗರದ ಅತೀ ಎತ್ತರದ ಕಟ್ಟಡವಾಗಿರುವ ಈ ಕಟ್ಟಡದ 8 ಹಾಗೂ 9ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಗಳು ಹೇಳಿವೆ. ಆದರೆ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಮೂರು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಕೊಲ್ಕತ್ತಾದ ಚೌರಿಂಗೀ ರಸ್ತೆಯಲ್ಲಿ `ದ 42′ ಎನ್ನುವ ಹೆಸರಿನ ಈ ಕಟ್ಟಡವಿದೆ.