ಕೇರಳ: ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಭುಗಿಲೆದ್ದಿದ್ದು ಇದೀಗ ಇದರ ಪರಿಣಾಮ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೂ ತಟ್ಟಿದೆ.
ಸೋಮವಾರ ಸಿಎಂ ನಿವಾಸದ ಆವರಣದಲ್ಲಿ ನೂರಾರು ಪ್ರತಿಭಟನಕಾರರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ.
ಭಾನುವಾರ ತಡರಾತ್ರಿ ಬಿಜೆಪಿ ಮುಖಂಡ ಸೇರಿದಂತೆ 60 ಮಂದಿ ಭಕ್ತರನ್ನು ಪೊಲೀಸರು ಬಂಧಿಸಿದ್ದಾರೆ.ರಾಜ್ಯದ ಅರಣ್ ಮುಲಾ, ಕೊಚ್ಚಿ, ಕೊಲ್ಲಮ್, ಖಲಾಡಿ, ಮಲ್ಲಪುರಂ, ಇಡುಕ್ಕಿ ಹೀಗೆ ಹಲವು ಪ್ರದೇಶಗಳಲ್ಲಿ ಪ್ರತಿಭಟನೇ ತೀವ್ರ ಮಟ್ಟದಲ್ಲಿ ನಡೆದಿದೆ. ಇದೀದ 144 ಸೆಕ್ಷನ್ ಜಾರಿ ಮಾಡಲಾಗಿದೆ.