ನವದೆಹಲಿ: ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳ ಪಟ್ಟಿಗೆ ತನ್ನನ್ನು ಸೇರಿಸಬಾರದು ಎಂದು ಮದ್ಯ ದೊರೆ ವಿಜಯ್ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿದೆ.
ಇಡಿಯು ಮಲ್ಯ ಅವರನ್ನು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳ ಪಟ್ಟಿಗೆ ಸೇರಿಸಬೇಕೆಂದು ಬಯಸಿದೆ. ಈ ಕಾಯ್ದೆಯಂತೆ ಮಲ್ಯ ಆಸ್ತಿಗಳನ್ನು ಮುಟ್ಟುಗೋಲು ಹಾಕಲು ಬಯಸಿದೆ.
ಮಲ್ಯ ತನ್ನ ಕಿಂಗ್ ಫಿಶರ್ ಏರ್ ಲೈನ್ಸ್ ಮತ್ತು ಇತರ ಕೆಲವು ಉದ್ಯಮಗಳಿಗೆ ಹಲವಾರು ಬ್ಯಾಂಕ್ ಗಳಿಂದ ಸುಮಾರು 9990.07 ಕೋಟಿ ರೂ. ಸಾಲ ತೆಗೆದು ಬಳಿಕ ವಿದೇಶಕ್ಕೆ ಪರಾರಿಯಾಗಿದ್ದಾರೆ.
ತನ್ನ ವಿರುದ್ಧ ಲಂಡನ್ ನ ಕೋರ್ಟ್ ನಲ್ಲಿ ಸಿಬಿಐ ಹಾಗೂ ಇಡಿ ಪರವಾಗಿ ಭಾರತ ಸರ್ಕಾರವು ಸಲ್ಲಿಸಿರುವ ಗಡಿಪಾರು ಅರ್ಜಿ ವಿರುದ್ಧ ಹೋರಾಡುತ್ತಿದ್ದಾರೆ.