News Kannada
Tuesday, September 27 2022

ದೇಶ-ವಿದೇಶ

ಹಲ್ಲಿದ್ದಲು ಹಗರಣ: ಮಾಜಿ ಕಾರ್ಯದರ್ಶಿ ಎಚ್ ಸಿ ಗುಪ್ತಾಗೆ 3 ವರ್ಷ ಜೈಲು ಶಿಕ್ಷೆ - 1 min read

Photo Credit :

ಹಲ್ಲಿದ್ದಲು ಹಗರಣ: ಮಾಜಿ ಕಾರ್ಯದರ್ಶಿ ಎಚ್ ಸಿ ಗುಪ್ತಾಗೆ 3 ವರ್ಷ ಜೈಲು ಶಿಕ್ಷೆ

ನವದೆಹಲಿ: ಯುಪಿಎ ಸರ್ಕಾರದ ಆಡಳಿತದ ವೇಳೆ ನಡೆದಿರುವಂತಹ ಕಲ್ಲಿದ್ದಲು ಹಗರಣದಲ್ಲಿ ಭಾಗಿಯಾಗಿರುವ ಮಾಜಿ ಕಲ್ಲಿದ್ದಲು ಕಾರ್ಯದರ್ಶಿ ಎಚ್ ಸಿ ಗುಪ್ತಾ ಅವರಿಗೆ ದೆಹಲಿ ಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಇನ್ನಿಬ್ಬರು ಅಧಿಕಾರಿಗಳಾಗಿರುವ ಕೆಎಸ್ ಕ್ರೊಪಾ ಮತ್ತು ಕೆಸಿ ಸಮರಿಯಾ ಅವರಿಗೂ ಕೋರ್ಟ್ ಮೂರು ವರ್ಷಗಳ ಜೈಲು ಶಿಕ್ಷೆ ನೀಡಿದೆ.

ವಿಶೇಷ ನ್ಯಾಯಾಧಿಶರಾಗಿರುವ ಭಾರತ್ ಪ್ರಾಸಾರ್ ಅವರು ಇತರ ಅಪರಾಧಿಗಳಾಗಿರುವ ವಿಕಾಸ್ ಮೆಟಲ್ ಆ್ಯಂಡ್ ಪವರ್ ಲಿಮಿಟೆಡ್ ನ ವಿಕಾಸ್ ಪಟ್ನಿ ಮತ್ತು ಈ ಕಂಪೆನಿಯ ಸಹಿ ಅಧಿಕಾರ ಹೊಂದಿದ್ದ ಆನಂದ್ ಮಲಿಕ್ ಅವರಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಂಪೆನಿಗೆ ಒಂದು ಲಕ್ಷ ರೂ. ದಂಡ ವಿಧಿಸಲಾಗಿದೆ.

ಐದು ಮಂದಿ ಅಪರಾಧಿಗಳಿಗೆ ಏಳು ವರ್ಷಗಳ ಜೈಲು ಶಿಕ್ಷೆ ನೀಡಬೇಕು ಮತ್ತು ಭಾರೀ ಪ್ರಮಾಣದ ದಂಡ ಹೇರಬೇಕೆಂದು ಸಿಬಿಐ ಕೋರ್ಟ್ ಗೆ ಮನವಿ ಮಾಡಿಕೊಂಡಿತ್ತು.

ನವಂಬರ್ 30ರಂದು ಕೋರ್ಟ್ ಕಲ್ಲಿದ್ದಲು ಸಚಿವಾಲಯದ ಮಾಜಿ ಜತೆ ಕಾರ್ಯದರ್ಶಿ ಗುಪ್ತಾ, ಕ್ರೋಪಾ ಮತ್ತು ಸಚಿವಾಲಯದಲ್ಲಿ ನಿರ್ದೇಶಕರಾಗಿದ್ದ ಸಮರಿಯಾ ದೋಷಿಗಳೆಂದು ಕೋರ್ಟ್ ತೀರ್ಪು ನೀಡಿತ್ತು. ಹಗರಣದಲ್ಲಿ ಭಾಗಿಯಾದ ಕಂಪೆನಿ, ಪಟ್ನಿ ಮತ್ತು ಮಲಿಕ್ ಕೂಡ ಅಪರಾಧಿಗಳು ಎಂದು ಹೇಳಿತ್ತು.

See also  ಗುಜರಾತ್ ಗೆ ಅಪ್ಪಳಿಸಲಿದೆ `ವಾಯು' ಚಂಡ ಮಾರುತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು