News Kannada
Thursday, February 09 2023

ದೇಶ-ವಿದೇಶ

ಸಂಕ್ರಾಂತಿ ಆಚರಣೆಗೆ ತೆರಳುತ್ತಿದ್ದ ಬೋಟ್ ಮುಳುಗಿ ಆರು ಮಂದಿ ಜಲಸಮಾಧಿ

Photo Credit :

ಸಂಕ್ರಾಂತಿ ಆಚರಣೆಗೆ ತೆರಳುತ್ತಿದ್ದ ಬೋಟ್ ಮುಳುಗಿ ಆರು ಮಂದಿ ಜಲಸಮಾಧಿ

ನಂದುರ್ಬಾದ್: ಮಕರ ಸಂಕ್ರಾಂತಿ ಆಚರಣೆಗೆಂದು ತೆರಳುತ್ತಿದ್ದ ಬೋಟ್ ಮುಳುಗಿದ ಪರಿಣಾಮ ಆರು ಮಂದಿ ಜಲಸಮಾಧಿಯಾಗಿರುವ ಘಟನೆಯು ಮಹಾರಾಷ್ಟ್ರದ ನಂದುರ್ಬಾದ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.

ಬೋಟ್ ಸುಮಾರು 60 ಮಂದಿಯನ್ನು ಸಾಗಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಕರ ಸಂಕ್ರಾಂತಿಯಂದು ನದಿ ಪೂಜೆ ಮಾಡಲು ಜನರು ಬೋಟ್ ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಹೆಚ್ಚಿನವರನ್ನು ರಕ್ಷಿಸಲಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿದೆ. ಹುಡುಕಾಟ ನಡೆಯುತ್ತಿದ್ದು, ಮೃತರ ಸಂಖ್ಯೆಯು ಹೆಚ್ಚಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೋಟ್ ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಜನರನ್ನು ತುಂಬಿಸಿಕೊಂಡು ಹೋಗುತ್ತಿದ್ದ ಪರಿಣಾಮ ಈ ದುರ್ಘಟನೆ ನಡೆದಿರಬಹುದೆಂದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

See also  ಸಿಯಾಚಿನ್ ನಲ್ಲಿ ಹಿಮಪಾತ: ಹತ್ತು ಯೋಧರು ಮೃತ್ಯು?
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು