ನವದೆಹಲಿ: ಶುಕ್ರವಾರ ವಿತ್ತ ಸಚಿವರಾದ ಪಿಯೂಸ್ ಗೋಯಲ್ ಅವರು ಮಂಡಿಸಿರುವ ಬಜೆಟ್ ಕೇವಲ ಟ್ರೇಲರ್ ಮಾತ್ರ, ಇನ್ನು ಹಲವಾರು ಯೋಜನೆಗಳು ಚುನಾವಣೆ ಬಳಿಕದ ಬಜೆಟ್ ನಲ್ಲಿ ಘೋಷಣೆಯಾಗಲಿದೆ ಎನ್ನುವ ಸೂಚನೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಸದ್ಯದಲ್ಲೇ ಚುನಾವಣೆ ಬರಲಿರುವ ಕಾರಣದಿಂದಾಗಿ ಇದು ಮಧ್ಯಂತರ ಬಜೆಟ್ ಆಗಿದೆ. ಮುಂದಿನ ಚುನಾವಣೆ ಬಳಿಕ ಮಂಡಿಸಲಿರುವ ಬಜೆಟ್ ನಲ್ಲಿ ಬಡ, ಮಧ್ಯಮ ಹಾಗೂ ಕಾರ್ಮಿಕ ವರ್ಗಕ್ಕೆ ಇನ್ನಷ್ಟು ಯೋಜನೆಗಳನ್ನು ಘೋಷಿಸಲಾಗುವುದು ಎಂದು ಬಜೆಟ್ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಿಳಿಸಿದರು.
ಈ ಬಜೆಟ್ ಎಲ್ಲಾ ವರ್ಗದವರಿಗೂ ಸಂತಸ ನೀಡಿದೆ. ಜಿಡಿಪಿ ಹೆಚ್ಚಳಕ್ಕೆ ಒತ್ತು ನೀಡುವ ಜತೆಗೆ ಹೊಸ ಭಾರತ ನಿರ್ಮಾಣಕ್ಕೆ ಪೂರಕವಾದ ಬಜೆಟ್ ಇದಾಗಿದೆ ಎಂದು ಮೋದಿ ಈ ಬಜೆಟ್ ನ್ನು ಶ್ಲಾಘಿಸಿದರು.
ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಸ್ಕೀಂ ನಿಂದಾಗಿ 12 ಕೋಟಿ ರೈತರಿಗೆ ನೆರವಾಗಲಿದೆ ಎಂದರು.