ನವದೆಹಲಿ: ಅನಾರೊಗ್ಯದಿಂದ ಬಳಲುತ್ತಿದ್ದ ಗೋವಾ ಸಿಎಂ ಮನೋಹರ್ ಪರಿಕ್ಕರ್ ಅವರ ಆರೋಗ್ಯ ತುಂಬಾ ಗಂಭೀರವಾಗಿದ್ದು ಇದೀಗ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪರಿಕ್ಕರ್(63) ಅವರು ಪ್ಯಾಂಕ್ರಿಯಾಟಿಕ್ ಸಮಸ್ಯೆಯಿಂದ ಬಳಲುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಮೈಕೆಲ್ ಲೋಬೋ ಅವರು, ಪರಿಕ್ಕರ್ ಅವರ ಆರೋಗ್ಯ ಗಂಭೀರವಾಗಿದ್ದು ಅವರ ಪರಿಸ್ಥಿತಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕು.
ಗುಣಪಡಿಸಲಾಗದ ಸಮಸ್ಯೆಯಿಂದ ಪರಿಕ್ಕರ್ ಅವರು ಬಳಲುತ್ತಿದ್ದಾರೆ. ದೇವರ ಆಶೀರ್ವಾದಿಂದ ಅವರು ಬದುಕುತ್ತಿದ್ದಾರೆ ಎಂದು ಹೇಳಿದ್ದರು.