ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ) ತನಿಖೆಗೆ ಹಾಜರಾಗಬೇಕಿದ್ದ ತನ್ನ ಪತಿ ರಾಬರ್ಟ್ ವಾದ್ರಾ ಅವರನ್ನು ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕಾರಿನಲ್ಲಿ ಬಿಟ್ಟು ಹೋಗಿರುವುದಾಗಿ ವರದಿಗಳು ಹೇಳಿವೆ.
ಪ್ರಿಯಾಂಕಾ ಗಾಂಧಿ ತಮ್ಮ ಬಿಳಿ ಬಣ್ಣದ ಟೊಯೊಟಾ ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ವಾದ್ರಾರನ್ನು ಬಿಟ್ಟು ಹೋಗಿದ್ದಾರೆ. ಬೆಂಗಾವಲು ವಾಹನದಲ್ಲಿ ಈ ಕಾರು ಬಂದಿತ್ತು.
ವಾದ್ರಾ ಅವರು ತನಿಖಾ ಸಂಸ್ಥೆಯಾಗಿರುವ ಜಾರಿ ನಿರ್ದೇಶನಾಲಯ ಮುಂದೆ ಮೊದಲ ಸಲ ಹಾಜರಾಗುತ್ತಿದ್ದಾರೆ.
ವಾದ್ರಾ ಲಂಡನ್ ನಲ್ಲಿ ಸುಮಾರು 9 ಆಸ್ತಿಗಳನ್ನು ಹೊಂದಿದ್ದಾರೆ. ಇದರಲ್ಲಿ 5 ವಿಲ್ಲಾಗಳು, ಐಷಾರಾಮಿ ಫ್ಲ್ಯಾಟ್ ಗಳು ಸೇರಿವೆ. ಇದೆವಲ್ಲವನ್ನೂ 2005ರಿಂದ 2010ರ ಮಧ್ಯೆ ಖರೀದಿಸಲಾಗಿತ್ತು.