ಮುಂಬಯಿ: ಭಾರತೀಯ ರಿಸರ್ವ ಬ್ಯಾಂಕ್ ಬಡ್ಡಿ ದರವನ್ನು 0.25ರಷ್ಟು ಕಡಿಗೊಳಿಸಿದೆ.
ಇದರಿಂದಾಗಿ ಬಡ್ಡಿ ದರವು 6.25ಕ್ಕೆ ನಿಗದಿಯಾಗಿದೆ. ಇದರಿಂದಾಗಿ ಗೃಹ, ಮೋಟಾರು ವಾಹನಗಳ ಸಾಲಗಳು ಅಗ್ಗವಾಗಲಿದೆ ಎಂದು ಹೇಳಲಾಗಿದೆ.
ಆರ್ ಬಿಐನ ನೂತನ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಬಡ್ಡಿ ದರ ಇಳಿಸುವ ನಿರ್ಧಾರಕ್ಕೆ ಸಮಿತಿಯು ಸರ್ವಾನುಮತದಿಂದ ನಿರ್ಧರಿಸಿದೆ.
ಬಡ್ಡಿ ದರವನ್ನು ಇಳಿಸುವ ಪರಿಣಾಮ ಗೃಹ ಮತ್ತು ವಾಹನ ಸಾಲದ ಇಎಂಐ ಹೊರೆ ಕಡಿಮೆಯಾಗಲಿದೆ ಎಂದು ದಾಸ್ ತಿಳಿಸಿದರು.
ಆರ್ ಬಿಐ ಇಳಿಕೆ ಮಾಡಿರುವ ದರ ಪರಿಣಾಮ ರಿವರ್ಸ್ ರಿಪೋ ದರ ಕೂಡ ಶೇ.0.25ರಷ್ಟು ಕಡಿಮೆಯಾಗಿದೆ.