ಕ್ರಿಸ್ಟ್ ಚರ್ಚ್: ನ್ಯೂಜಿಲೆಂಡ್ ನ ಕ್ರಿಸ್ಟ್ ಚರ್ಚ್ ನಲ್ಲಿರುವ ಎರಡು ಮಸೀದಿಗಳ ಮೇಲೆ ಆಗಂತುಕರು ಗುಂಡಿನ ದಾಳಿ ನಡೆಸಿದ ಪರಿಣಾಮ ಸುಮಾರು 49 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.
ಕ್ರಿಸ್ಟ್ ಚರ್ಚ್ ನಲ್ಲಿರುವ ಲಿನ್ ವುಡ್ ಇಸ್ಲಾಮಿಕ್ ಸೆಂಟರ್ ನಲ್ಲಿ 10 ಮಂದಿಯನ್ನು ಮತ್ತು ಆಲ್ ನೂರ್ ಮಸೀದಿಯಲ್ಲಿ 30 ಮಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಎರಡು ಮಸೀದಿಗಳ ಮೇಲೆ ನಡೆದಿರುವಂತಹ ದಾಳಿಯಲ್ಲಿ ಸುಮಾರು 49 ಮಂದಿ ಮೃತಪಟ್ಟಿದ್ದಾರೆ ಎಂದು ಕ್ರಿಸ್ಟ್ ಚರ್ಚ್ ನ ಪೊಲೀಸ್ ಕಮಿಷನರ್ ಮೈಕ್ ಬುಶ್ ತಿಳಿಸಿದ್ದಾರೆ.
ನ್ಯೂಜಿಲೆಂಡ್ ನ ಪ್ರಧಾನಮಂತ್ರಿ ಜಸಿಂದ ಅರ್ಡೆನ್ ಅವರು ಕಟುವಾಗಿ ಖಂಡಿಸಿದ್ದಾರೆ. ಇದು ನ್ಯೂಜಿಲೆಂಡ್ ನ ಕರಾಳ ದಿನಗಳಲ್ಲಿ ಒಂದಾಗಿದೆ. ಇದು ಸಹಿಸಲು ಸಾಧ್ಯವಿಲ್ಲದಿರುವ ಹಿಂಸೆಯ ಕೃತ್ಯ ಎಂದು ಅವರು ತಿಳಿಸಿದ್ದಾರೆ.