ಜಮ್ಮು-ಕಾಶ್ಮೀರ: ಉಗ್ರರ ಗ್ರೆನೇಡ್ ದಾಳಿಗೆ ಇಬ್ಬರು ಪೊಲಿಸರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬರಮುಲ್ಲಾ ಜಿಲ್ಲೆಯಲ್ಲಿ ಗುರುವಾರ ನಡೆದಿದೆ.
ಈ ಘಟನೆ ಬರಮುಲ್ಲಾ ಜಿಲ್ಲೆಯ ವಾರ್ಪೋರ್ ಪ್ರದೇಶದಲ್ಲಿ ನಡೆದಿದೆ.
ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು ಕಾರ್ಯಾಚರಣೆ ಮುಂದುವರೆದಿದೆ.