ನವದೆಹಲಿ: ಪುಲ್ವಾಮಾದಲ್ಲಿ ಸೈನಿಕರ ಮೇಲೆ ನಡೆದಿರುವಂತಹ ದಾಳಿಯು ಪಿತೂರಿ ಎಂದು ಸಮಾಜವಾದಿ ಪಕ್ಷ(ಎಸ್ ಪಿ) ನಾಯಕ ರಾಮ್ ಗೋಪಾಲ್ ಯಾದವ್ ಆರೋಪಿಸಿದ್ದಾರೆ.
ಜಮ್ಮುಕಾಶ್ಮೀರ ಮತ್ತು ಸಿಆರ್ ಪಿಎಫ್ ಯೋಧರು ಪ್ರಯಾಣಿಸುತ್ತಿದ್ದ ವೇಳೆ ಯಾವುದೇ ತಪಾಸಣೆ ಇರಲಿಲ್ಲ. ಯೋಧರು ವಿಮಾನಯಾನ ಪ್ರಯಾಣ ಬಳಸಿದರೂ ಇದನ್ನು ನೀಡಲಾಗಿಲ್ಲ. ಸರ್ಕಾರದ ವಿರುದ್ಧ ಯೋಧರು ಅಸಮಾಧಾನಗೊಂಡಿದ್ದಾರೆ ಎಂದು ಅವರು ಹೇಳಿದರು.
ಸಿಆರ್ ಪಿಎಫ್ ಜವಾನರನ್ನು ಬಸ್ ನಲ್ಲಿ ಕಳುಹಿಸಲಾಗಿತ್ತು. ಇದು ಪಿತೂರಿಯಾಗಿದೆ. ಕೇಂದ್ರದಲ್ಲಿ ಸರ್ಕಾರ ಬದಲಾದರೆ ಇದರ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಯಾದವ್ ತಿಳಿಸಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರು, ರಾಮ್ ಗೋಪಾಲ್ ಯಾದವ್ ಅವರು ಯೋಧರ ನೈತಿಕ ಬಲ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.