ನವದೆಹಲಿ: ಹಿರಿಯ ನಟಿ, ರಾಜಕಾರಣಿ ಜಯಪ್ರದಾ ಅವರು ಸಮಾಜವಾದಿ ಪಕ್ಷ ತೊರೆದು ಮಂಗಳವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಜನಪ್ರದಾ ಬಿಜೆಪಿ ಅಭ್ಯರ್ಥಿಯಾಗಿ ರಾಮಪುರದಿಂದ ಸ್ಪರ್ಧಿಸಲಿರುವರು. ಇದಕ್ಕೆ ಮೊದಲು 2004 ಮತ್ತು 2009ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು ಗೆಲುವು ದಾಖಲಿಸಿದ್ದರು.
ಆದರೆ ಬಿಜೆಪಿ ಅಥವಾ ಜಯಪ್ರದಾ ಅವರು ರಾಮಪುರದಿಂದ ಸ್ಪರ್ಧಿಸುವ ಬಗ್ಗೆ ಅಧಿಕೃತವಾಗಿ ಏನೂ ಹೇಳಿಲ್ಲ. ಆದರೆ ಬಿಜೆಪಿ ಸ್ವಾಗತಕ್ಕೆ ಅವರು ಅಭಿನಂದನೆ ಸಲ್ಲಿಸಿದರು.
ಸಿನಿಮಾವಾಗಲಿ ಅಥವಾ ರಾಜಕೀಯವಾಗಲಿ, ನಾನು ಅತ್ಯುತ್ತಮ ಪ್ರಯತ್ನ ಮಾಡಿದ್ದೇನೆ. ಬಿಜೆಪಿ ಸ್ವಾಗತದಿಂದ ನನಗೆ ತುಂಬಾ ಸಂತಸವಾಗಿದೆ. ಇದಕ್ಕೆ ಮೊದಲು ಟಿಡಿಪಿ ಮತ್ತು ಸಮಾಜವಾದಿ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಈಗ ನಾನು ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಕೆಲಸ ಮಾಡಲಿದ್ದೇನೆ. ದೇಶ ಹಾಗೂ ಪಕ್ಷಕ್ಕಾಗಿ ನನ್ನನ್ನು ಸಮರ್ಪಿಸಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
ರಾಮಪುರದಿಂದ ಜಯಪ್ರದಾ ಅವರು ಸ್ಪರ್ಧಿಸುವುದಾದರೆ ಅವರು ಸಮಾಜವಾದಿ ಪಕ್ಷದ ಅಜಂ ಖಾನ್ ಅವರನ್ನು ಎದುರಿಸಲಿರುವರು. ಅಜಂ ಖಾನ್ ಅವರು ಈಗಾಗಲೇ ಜನಪ್ರದಾ ವಿರುದ್ಧ ಮಾನಹಾನಿ ಹೇಳಿಕೆಗಳನ್ನು ನೀಡಿದ್ದಾರೆ.