ದಂತೇವಾಡ: ಛತ್ತೀಸಗಡದ ದಂತೇವಾಡ ಜಿಲ್ಲೆಯ ನಕುಲ್ ನರ್ ಪ್ರದೇಶದಲ್ಲಿ ನಕ್ಸಲರ್ ಬಾಂಬ್ ಸ್ಫೋಟಿಸಿ ದಾಳಿ ನಡೆಸಿದ್ದು ಚುನಾವಣಾ ಪ್ರಚಾರ ನಡೆಸುತ್ತಿದ್ದ ಬಿಜೆಪಿ ಶಾಸಕ ಭೀಮಾ ಮಾಂಡವಿ ಸೇರಿ ಐದು ಮಂದಿ ಸಾವನ್ನಪ್ಪಿದ್ದಾರೆ.
ಎಲ್ ಇಡಿ ಸ್ಫೋಟಿಸಿ ದಾಳಿ ನಡೆಸಿದ್ದು, ಸ್ಫೋಟದ ತೀವ್ರತೆಗೆ ಐದು ಮಂದಿ ಸ್ಥಳದಲ್ಲೇ ಮೃತರಾಗಿದ್ದಾರೆ ಎಂದು ವರದಿ ಮಾಡಿದೆ.
ಶಾಸಕ ಭೀಮಾ ಮಾಂಡವಿ ಅವರು ಲೋಕಸಭಾ ಚುನಾವಣಾ ಪ್ರಚಾರ ಕೈಗೊಂಡ ವೇಳೆ ಅವಘಡೆ ಸಂಭವಿಸಿದೆ.