News Kannada
Thursday, December 01 2022

ದೇಶ-ವಿದೇಶ

ಅಯೋಧ್ಯೆ ಭೂ ವಿವಾದ: ಸಂಧಾನ ಸಮಿತಿಗೆ ಆ.15ರ ತನಕ ಕಾಲಾವಕಾಶ - 1 min read

Photo Credit :

ಅಯೋಧ್ಯೆ ಭೂ ವಿವಾದ: ಸಂಧಾನ ಸಮಿತಿಗೆ ಆ.15ರ ತನಕ ಕಾಲಾವಕಾಶ

ನವದೆಹಲಿ: ಅಯೋಧ್ಯೆಯ ವಿವಾದಿತ ಭೂಮಿ ಬಗ್ಗೆ ಒಂದು ಪರಿಹಾರ ಕಂಡುಕೊಳ್ಳಲು ತ್ರಿಸದಸ್ಯ ಸಂಧಾನ ಸಮಿತಿಗೆ ಆಗಸ್ಟ್ 15ರ ತನಕ ಕಾಲಾವಕಾಶ ನೀಡಿದೆ.

ಸುಪ್ರೀಂಕೋರ್ಟ್ ಗೆ ಮಧ್ಯಂತರ ವರದಿ ಸಲ್ಲಿಸಿರುವಂತಹ ಸಮಿತಿಯು ರಾಮಮಂದಿರ ಭೂ ವಿವಾದದ ಬಗ್ಗೆ ಪರಿಹಾರ ಕಂಡುಕೊಳ್ಳಲು ಇನ್ನಷ್ಟು ಸಮಯ ಕೇಳಿದೆ.

ನಾವು ಮಧ್ಯಂತರ ವರದಿ ಪಡೆದಿದ್ದೇವೆ ಮತ್ತು ಸಮಿತಿಯು ಹೆಚ್ಚುವರಿ ಸಮಯ ಕೇಳಿದೆ. ಆಗಸ್ಟ್ 15ರ ತನಕ ಹೆಚ್ಚುವರಿ ಸಮಯ ನೀಡಬೇಕು ಎಂದು ಸಮಿತಿಯ ಕಾರ್ಯಾಧ್ಯಕ್ಷರು ಕೇಳಿಕೊಂಡಿರುವುದಾಗಿ ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯಿ ತಿಳಿಸಿದರು.

ಮಾರ್ಚ್ 8ರಂದು ಸುಪ್ರೀಂಕೋರ್ಟ್ ಅಯೋಧ್ಯೆ ಭೂ ವಿವಾದ ಪರಿಹಾರ ಮಾಡಲು ತ್ರಿಸದಸ್ಯ ಸಮಿತಿ ರಚನೆ ಮಾಡಿತ್ತು. ಎರಡು ಪಕ್ಷಗಳನ್ನು ಒಮ್ಮತಕ್ಕೆ ತಂದು ಪರಿಹಾರ ಕಂಡುಕೊಳ್ಳಬೇಕು ಎಂದು ಕೋರ್ಟ್ ಸೂಚಿಸಿತ್ತು.

See also  ಹಾವೇರಿ ಡಿಸಿ, ಡಿಹೆಚ್​ಓ ವಿರುದ್ಧ ಹರಿಹಾಯ್ದ ಗೃಹ ಸಚಿವ ಬೊಮ್ಮಾಯಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು