News Kannada
Tuesday, November 29 2022

ದೇಶ-ವಿದೇಶ

ಕಮಲ್ ಹಾಸನ್ ನಾಲಗೆ ಕತ್ತರಿಸಿದ ಬಿಡಿ ಎಂದ ಸಚಿವ - 1 min read

Photo Credit :

ಕಮಲ್ ಹಾಸನ್ ನಾಲಗೆ ಕತ್ತರಿಸಿದ ಬಿಡಿ ಎಂದ ಸಚಿವ

ಚೆನ್ನೈ: ಸ್ವತಂತ್ರ ಭಾರತದ ಮೊದಲ ಉಗ್ರ ಒಬ್ಬ ಹಿಂದೂ ಎಂದು ಹೇಳಿರುವ ಕಮಲ್ ಹಾಸನ್ ನಾಲಗೆ ಕತ್ತರಿಸಬೇಕು ಎಂದು ತಮಿಳುನಾಡು ಸಚಿವ ರಾಜೇಂದ್ರ ಬಾಲಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಕಮಲ್ ಹಾಸನ್, ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆ ಒಬ್ಬ ಉಗ್ರ ಮತ್ತು ಆತ ಹಿಂದೂವಾಗಿದ್ದ ಎಂದು ಹೇಳಿದ್ದರು. ಇದರ ವಿರುದ್ಧ ಬಾಲಾಜಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಮಲ್ ಹಾಸನ್ ಯಾವಾಗಲೂ ವಿವಾದವಾಗುವಂತೆ ಮಾತನಾಡುತ್ತಾರೆ. ಹಿಂದೂಗಳು ಕಡಿಮೆ ಇರುವಂತಹ ಪ್ರದೇಶಕ್ಕೆ ಹೋಗಿ ಹಿಂದೂಗಳು ಉಗ್ರರು ಎಂಬ ಹೇಳಿಕ ನೀಡಿರುವರು. ಭಯೋತ್ಪಾದನೆಗೆ ಧರ್ಮವಿಲ್ಲ ಎನ್ನುವುದು ಅವರಿಗೆ ತಿಳಿದಿರಲಿ ಎಂದು ಎಐಎಡಿಎಂಕೆ ಮುಖಂಡ ಬಾಲಾಜಿ ತಿಳಿಸಿದ್ದಾರೆ.

ಕಮಲ್ ಹಾಸನ್ ಹೇಳಿಕೆ ವಿರುದ್ಧ ಬಿಜೆಪಿ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮತ ಪಡೆಯುವ ದೃಷ್ಟಿಯಿಂದ ಧರ್ಮಕ್ಕೆ ಅವಹೇಳನ ಮಾಡಿದ್ದಾರೆ ಎಂದು ಹೇಳಿದ್ದಾರೆ. 

See also  ರಾಸಾಯನಶಾಸ್ತ್ರದಲ್ಲಿ ಕೇವಲ 24 ಅಂಕ! ಈಗ ಐಎಎಸ್ ಅಧಿಕಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು