ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ಪಕ್ಷದವರನ್ನು ಟೀಕಿಸುತ್ತಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರ ಟ್ವಿಟರ್ ಖಾತೆ ಡಿಲೀಟ್ ಆಗಿದ್ದು ಶನಿವಾರ ತಿಳಿದುಬಂದಿದೆ.
ಇದೀಗ ರಮ್ಯಾ ಅವರು ಆ ಹುದ್ದೆಯನ್ನು ತೊರೆದಿದ್ದಾರೆಯೇ ಎಂಬ ಅನುಮಾನ ಶುರುವಾಗಿದೆ.
ಈ ಸಂಬಂಧ ಎಎನ್ ಐ ಟ್ವೀಟ್ ಮಾಡಿ ‘ದಿವ್ಯಾ ಸ್ಪಂದನ ಟ್ವಿಟರ್ ಡಿಲೀಟ್ ಆಗಿದೆ, ಅವರು ಕಾಂಗ್ರೆಸ್ ಸಾಮಾಜಿಕ ಮುಖ್ಯಸ್ಥೆ ಸ್ಥಾನದಿಂದ ಹೊರ ನಡೆದರೆ ಎಂದು ಬರೆದುಕೊಂದಿದ್ದಾರೆ. ಆದರೆ ಈ ಸಂಬಂಧ ರಮ್ಯಾ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.