ಮಾರ್ಗೋ: ರೈಲ್ವೆ ಹಳಿಯಲ್ಲಿ ಓಡಾಡುತ್ತಿದ್ದ ನಾಲ್ಕು ವರ್ಷದ ಬಾಲಕನನ್ನು ನೋಡಿ ಲೋಕೋ ಪೈಲಟ್ ರೈಲು ನಿಲ್ಲಿಸಿ ಬಾಲಕನನ್ನು ರಕ್ಷಿಸಿದ ಘಟನೆ ಸೋಮವಾರ ನಡೆದಿದೆ.
70103 ಡೌನ್ ಪರ್ನೆಮೆ ಕಾರವಾರ ಡೆಮೋ ರೈಲಿನ ಸುರೇಶ್ ಕುಮಾರ್ ಬಾಲಕನನ್ನು ರಕ್ಷಿಸಿದ ಲೋಕೋ ಪೈಲಟ್.
ಈ ಘಟನೆ ಮಾರ್ಗವೋ ಹಾಗು ಬಾಲಿ ರೈಲ್ವೆ ಸ್ಟೇಶನ್ ನಲ್ಲಿ ನಡೆದಿದೆ. ಸುರೇಶ್ ಅವರು ರೈಲ್ವೆ ಚಲಿಸುತ್ತಿದ್ದಾಗ ದೂರದಲ್ಲಿ ಬಾಲಕನೊಬ್ಬ ಅಲೆದಾಡುತ್ತಿರುವುದನ್ನು ನೋಡಿದ್ದಾರೆ. ಕೂಡಲೇ ಅವರು ರೈಲು ನಿಲುಗಡೆಗೆ ಬ್ರೇಕ್ ಹಾಕಿದ್ದಾರೆ. ರೈಲಿನಿಂದ ಇಳಿದು ಬಾಲಕನನ್ನು ವಿಚಾರಿಸಿದಾಗ ಬಾಲಕ ತನ್ನ ಪೋಷಕರ ಕೈಯಿಂದ ತಪ್ಪಿಸಿಕೊಂಡಿದ್ದಾನೆ. ಇದರಿಂದ ರೈಲು ಹಳಿಯಲ್ಲಿ ಅಳುತ್ತಾ ಕೂತಿದ್ದಾನೆ ಎಂದು ತಿಳಿದುಬಂದಿದೆ.
ಕೂಡಲೇ ಆತನನ್ನು ಬಾಲಿ ರೈಲ್ವೆ ಸ್ಟೇಶನ್ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಕುನ್ಕೋಲಿಂ ಪೊಲೀಸ್ ಠಾಣೆಯ ಪೊಲೀಸರು ಮಗುವನ್ನು ಇದೀಗ ಪೋಷಕರ ಮಡಿಲಿಗೆ ಒಪ್ಪಿಸಿದ್ದಾರೆ. ಅಶೋಕ್ ಅವರ ಸಮಯ ಪ್ರಜ್ಞೆ ಹಾಗೂ ಮಾನವೀಯತೆಯನ್ನು ಎಲ್ಲರೂ ಕೊಂಡಾಡಿದ್ದಾರೆ.