ಶ್ರೀನಗರ: 10 ಮೋಸ್ಟ್ ವಾಟೆಂಡ್ ಉಗ್ರಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ಪಟ್ಟಿಯನ್ನು ಇಂದು ಸೇನಾಪಡೆ ಬಿಡುಗಡೆ ಮಾಡಿದೆ. ಈ ಮೂಲಕ ಗ್ರ ಸಂಘಟನೆಯಗಳಿಗೆ ಭಾರತೀಯ ಸೇನಾ ಪಡೆ ಎಚ್ಚರಿಕೆಯ ಗಂಟೆಯನ್ನು ನೀಡಿದೆ.
2010ರಿಂದ ಭಯೋತ್ಪಾದಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಹಿಜ್ಮುಲ್ ಮುಜಾಹಿದ್ದೀನ್, ವಾಲಿ ರಿಯಾಜ್ ಅಹ್ಮದ್ ಸೇರಿದಂತೆ ಶ್ರೀನಗರದ ಮೊಹಮ್ಮದ್ ಆಶ್ರಫ್ ಖಾನ್, ಬರಾಮುಲ್ಲಾದ ಮೆಹ್ರಾಜ್ ಉದ್ ದಿನ್, ಶ್ರೀನಗರದ ಡಾ. ಸೈಪುಲ್ಲಾ, ಕುಪ್ವಾರ ಹಜಾಜ್ ಅಹ್ಮದ್ ಮಲಿಕ್ ಹಾಗೂ ಆರ್ಷದ್ ಉಲ್ ಹೆಸರೂ ಇದೆ.
ಈಚೆಗೆ ಶೋಫಿಯಾನ್ ದಾಳಿ ನಡೆಸಿದ ಲಸ್ಕರ್ ಇ-ತೊಯ್ಬಾ ಉಗ್ರ ಸಂಘಟನೆಯ ವಸೀಂ ಅಹ್ಮದ್ ಇದ್ದಾನೆ. ಜೈಶ್ ಈ ಮೊಹಮ್ಮದ್ ಸಂಘಟನೆಯ ಹಫೀಜ್ ಉಮಾರ್ ಹಾಗೂ ಜಹೀದ್ ಶೇಕ್ , ಜಾವೇದ್ ಅಹಮ್ಮದ್ ಕೂಡ ಪಟ್ಟಿಯಲ್ಲಿದ್ದಾರೆ.