ನವದೆಹಲಿ: ಜೂನ್ 3ರಂದು ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ಯುದ್ಧ ವಿಮಾನದ ಅವಶೇಷಗಳು ಅರುಣಾಚಲ ಪ್ರದೇಶದ ಲಿಪೊದಲ್ಲಿ ಮಂಗಳವಾರ ಪತ್ತೆಯಾಗಿದೆ.
ಲಿಪೊದಿಂದ 16 ಕಿ.ಮೀ. ಉತ್ತರದಲ್ಲಿ ಎಎನ್32 ಅವಶೇಷಗಳು ಪತ್ತೆಯಾಗಿದೆ ಎಂದು ವಾಯುಪಡೆಯು ಟ್ವಿಟ್ಟರ್ ನಲ್ಲಿ ದೃಢಪಡಿಸಿದೆ.
ವಿಮಾನದಲ್ಲಿ ಇದ್ದವರ ಶವಗಳಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಒಂದು ಸಲ ಪತ್ತೆಯಾದರೆ ಇದರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ಐಎಎಫ್ ತಿಳಿಸಿದೆ.
13 ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನವು ಟೇಕ್ ಆಫ್ ಆದ ಬಳಿಕ ರಾಡರ್ ನಿಂದ ಸಂಪರ್ಕ ಕಳೆದುಕೊಂಡಿತ್ತು.