ಕೊಲ್ಕತ್ತಾ: ಸ್ಥಳೀಯ ಮಾಂತ್ರಿಕನೊಬ್ಬ ವಿಶ್ವ ಪ್ರಸಿದ್ಧ ಮಾಂತ್ರಿಕ ಹ್ಯಾರಿ ಹೌದಿನಿಯ ಅಪಾಯಕಾರಿ ಅಂಡರ್ ವಾಟರ್ ಎಸ್ಕೇಪ್ ಮ್ಯಾಜಿಕ್ ಮಾಡಲು ಯತ್ನಿಸಿ ನದಿ ಪಾಲಾಗಿರುವ ಘಟನೆಯು ನಡೆದಿದೆ.
ಭಾನುವಾರ ಸಂಜೆ ಚಂಚಲ್ ಲಾಹಿರಿ ಎಂಬ ಜಾದೂಗಾರ ವೇಳೆಗೆ ಕೈಕಾಲುಗಳನ್ನು ಸಂಕೋಲೆಯಿಂದ ಬಿಗಿದುಕೊಂಡು, ಕಣ್ಣಿಗೆ ಬಟ್ಟೆಕಟ್ಟಿಕೊಂಡು, ಬಂಧಿಯಾಗಿ ಹೌರಾ ಸೇತುವೆಯಿಂದ ಧುಮುಕಿದ್ದರು.
ಆದರೆ ನಿಗದಿತ ಸಮಯದ ಬಳಿಕವು ಚಂಚಲ್ ಲಾಹಿರಿ ಮೇಲೆ ಬರದೇ ಇರುವ ಕಾರಣ ಈಗ ಆತ ಗಂಗಾ ನದಿ ಪಾಲಾಗಿರಬಹುದು ಎಂದು ಭಾವಿಸಲಾಗಿದೆ. ಇದರಿಂದ ಮ್ಯಾಜಿಕ್ ಪ್ರಿಯರು ತುಂಬಾ ಆತಂಕಕ್ಕೆ ಒಳಗಾಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಮುಳುಗು ತಜ್ಞರು ಬಂದು ಹುಡುಕಾಟ ನಡೆಸಿದರೂ ಇದುವರೆಗೆ ಚಂಚಲ್ ಲಾಹಿರಿ ಮೃತದೇಹವು ಪತ್ತೆಯಾಗಿಲ್ಲ.