ಶ್ರೀನಗರ: ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಸಜ್ಜದ್ ಮಕ್ಬೂಲ್ ಭಟ್ ಮತ್ತು ಮತ್ತೋರ್ವ ಉಗ್ರ ತೌಸಿಫ್ ನನ್ನು ಸೇನಾ ಪಡೆಯು ಎನ್ ಕೌಂಟರ್ ಮಾಡಿದೆ.
ಅನಂತ್ ನಾಗ್ ಜಿಲ್ಲೆಯಲ್ಲಿ ಮಂಗಳವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇವರಿಬ್ಬರನ್ನು ಎನ್ ಕೌಂಟರ್ ಮಾಡಲಾಗಿದೆ.
ಪುಲ್ವಾಮಾ ದಾಳಿಗೆ ಕಾರನ್ನು ಒದಗಿಸಿದ್ದು ಸಜ್ಜದ್ ಭಟ್ ಎಂದು ತಿಳಿದುಬಂದಿದೆ. ತೌಸಿಫ್ ಲಷ್ಕರ್ ಸಂಘಟನೆಯ ಪ್ರಮುಖ ಉಗ್ರ ಎಂದು ಸೇನಾ ಪಡೆಯು ಹೇಳಿದೆ.
ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಸೇನಾ ಮೇಜರ್ ಹುತಾತ್ಮರಾದರೆ, ಮತ್ತೊಬ್ಬ ಅಧಿಕಾರಿ ಹಾಗೂ ಇಬ್ಬರು ಯೋಧರು ಗಾಯಗೊಂಡಿದ್ದರು.