ನವದೆಹಲಿ: ರಿಸರ್ಚ್ ಅನಾಲಿಸಿಸ್ ವಿಂಗ್(ರಾ) ಮುಖ್ಯಸ್ಥರನ್ನಾಗಿ ಸಮಂತ್ ಗೋಯಲ್ ಮತ್ತು ಗುಪ್ತಚರ ದಳ(ಐಬಿ) ಮುಖ್ಯಸ್ಥರಾಗಿ ಐಪಿಎಸ್ ಅಧಿಕಾರಿ ಅರವಿಂದ್ ಕುಮಾರ್ ಅವರನ್ನು ಸರ್ಕಾರ ನೇಮಕ ಮಾಡಿದೆ.
ಭಾರತೀಯ ಸೇನೆಯು ಬಾಲಾಕೋಟ್ ನಲ್ಲಿ ಉಗ್ರರ ನೆಲೆಗಳ ಮೇಲೆ ನಡೆಸಿದ ದಾಳಿಯಲ್ಲಿ ಸಮಂತ್ ಗೋಯಲ್ ಅವರು ಪ್ರಮುಖ ಸೂತ್ರಧಾರಿಯಾಗಿದ್ದರು.
ಗೋಯಲ್ ಅವರು 1984ನೇ ಬ್ಯಾಚ್ ನ ಪಂಜಾಭ್ ಕೇಡರ್ ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅರವಿಂದ್ ಕುಮಾರ್ ಅವರು ಕೂಡ ಇದೇ ವರ್ಷದ ಅಸ್ಸಾಂ-ಮೇಘಾಲಯ ಕೇಡರ್ ನ ಐಪಿಎಸ್ ಅಧಿಕಾರಿ.
ಈ ತಿಂಗಳ ಅಂತ್ಯದಲ್ಲಿ ರಾ ಮುಖ್ಯಸ್ಥ ಅನಿಲ್ ಕೆ ಧಸ್ಮನ ಮತ್ತು ಐಬಿ ಮುಖ್ಯಸ್ಥ ಜೈನ್ ಅವರು ಅವಧಿಯು ಕೊನೆಗೊಳ್ಳುತ್ತಿದೆ. ಇವರಿಬ್ಬರು ಆರು ತಿಂಗಳ ಮೊದಲೇ ನಿವೃತ್ತಿಯಾಗಬೇಕಿತ್ತು. ಆದರೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇವರ ಸೇವಾವಧಿ ಆರು ತಿಂಗಳು ವಿಸ್ತರಿಸಲಾಗಿತ್ತು.