ಮಹಾರಾಷ್ಟ್ರ: ಮಲಾಡ್ ನಲ್ಲಿ ಗೋಡೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಸಂಖ್ಯೆ ಗುರುವಾರ 27ಕ್ಕೆ ಏರಿಕೆಯಾಗಿದೆ.
ಮುಂಬೈನಲ್ಲಿ ಕಳೆದೆರಡು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಮಂಗಳವಾರ ಮಲಾಡ್ ನಲ್ಲಿ ಗೋಡೆ ಕುಸಿದಿದೆ. ಘಟನೆಯಲ್ಲಿ 121ಮಂದಿ ಗಾಯಗೊಂಡಿದ್ದು, 27 ಮಂದಿ ಮೃತರಾಗಿದ್ದಾರೆ ಎಂದು ವರದಿಯಾಗಿದೆ.
23ಮಂದಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, 71 ಮಂದಿಗೆ ಚಿಕಿತ್ಸೆ ಮುಂದುವರೆಯುತ್ತಿದೆ.