ನವದೆಹಲಿ: ತನ್ನ ಮೊದಲ ಬಜೆಟ್ ಮಂಡಿಸಿದ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ದಾಖಲೆಗಳನ್ನು ಸೂಟ್ ಕೇಸ್ ನಲ್ಲಿ ಇಡುವ ಬದಲು ನಾಲ್ಕು ಬಾರಿ ಮಡಚಿದ ಕೆಂಪು ಬಟ್ಟೆಯಲ್ಲಿ ಸುತ್ತಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.
ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಹ್ಮಣ್ಯನ್ ಅವರು ಈ ಬಗ್ಗೆ ಮಾಹಿತಿ ನೀಡುತ್ತಾ, ಇದು ಭಾರತೀಯ ಸಂಪ್ರದಾಯ ಎಂದರು. ವಿತ್ತ ಸಚಿವರು ಮಾಡಿರುವಂತಹ ಬದಲಾವಣೆಯು “ಗುಲಾಮಗಿರಿಯಿಂದ ಪಡೆದಿರುವ ಮುಕ್ತಿ” ಎಂದಿದ್ದಾರೆ.
ಇದು ಭಾರತೀಯ ಸಂಪ್ರದಾಯವಾಗಿದೆ. ವಿದೇಶಿ ಸಂಪ್ರದಾಯದ ಗುಲಾಮಗಿರಿಯಿಂದ ಮುಕ್ತರಾಗಿರುವುದು ಇದರ ಸೂಚನೆಯಾಗಿದೆ. ಇದು ಬಜೆಟ್ ಅಲ್ಲ, ಆದರೆ ಖಾತೆ ಪುಸ್ತಕ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.