ರಾಯಪುರ: ಭದ್ರತಾ ಪಡೆಗಳು ನಡೆಸಿರುವ ಎನ್ ಕೌಂಟರ್ ನಲ್ಲಿ ಮೂವರು ಮಹಿಳೆಯರ ಸಹಿತ ನಾಲ್ಕು ಮಂದಿ ನಕ್ಸಲೀಯರು ಹತ್ಯೆಯಾಗಿರುವ ಘಟನೆಯು ಛತ್ತೀಸಗಡದ ಧಮ್ತಾರಿ ಜಿಲ್ಲೆಯಲ್ಲಿ ನಡೆದಿದೆ.
ಶನಿವಾರ ಬೆಳಗ್ಗೆ ನಕ್ಸಲ್ ನಿಗ್ರಹ ಪಡೆಯು ಕಾರ್ಯಾಚರಣೆ ನಡೆಸಿದ ವೇಳೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿದಾಳಿ ನಡೆಸಿದ ವೇಳೆ ಎನ್ ಕೌಂಟರ್ ನಡೆದಿದೆ.
ನಕ್ಸಲರಿಗಾಗಿ ಶೋಧ ಕಾರ್ಯವು ಮುಂದುವರಿದಿದೆ ಎಂದು ನಕ್ಸಲ್ ನಿಗ್ರಹ ಘಟಕದ ರಾಜ್ಯ ಉಪ ಇನ್ಸ್ ಪೆಕ್ಟರ್ ಸುಂದರ್ ರಾಜ್ ಪಿ ತಿಳಿಸಿದರು.
ಎನ್ ಕೌಂಟರ್ ನಡೆದಿರುವ ಜಾಗದಲ್ಲಿ ಬಂದೂಕುಗಳು ಪತ್ತೆಯಾಗಿದೆ ಎಂದು ಅವರು ಹೇಳಿದರು.