ಲಕ್ನೋ: ಜಮೀನು ವಿವಾದದಿಂದಾಗಿ ಗ್ರಾಮ ಪ್ರಧಾನನಿಂದ ಗುಂಡಿನ ದಾಳಿಗೆ 10 ಮಂದಿ ಗ್ರಾಮಸ್ಥರು ಬಲಿಯಾಗಿರುವ ಸೋನಭದ್ರಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾರನ್ನು ಜಿಲ್ಲಾಡಳಿತವು ತಡೆ ಹಿಡಿದಿದೆ.
ಕಾಂಗ್ರೆಸ್ ನಾಯಕಿಯು ವಾರಣಸಿಯಲ್ಲಿ ಗಾಯಗೊಂಡವರನ್ನು ಭೇಟಿಯಾದ ಬಳಿಕ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಅವರನ್ನು ಹಾಗೂ ಭದ್ರತಾ ಸಿಬ್ಬಂದಿಯನ್ನು ತಡೆಯಲಾಗಿದೆ.
ಮಿರ್ಜಾಪುರದ ನಾರಾಯಣಪುರದಲ್ಲಿ ಆಡಳಿತವು ತಡೆದ ಬಳಿಕ ಪ್ರಿಯಾಂಕಾ ಅವರು ಅಲ್ಲೇ ಧರಣಿ ಕುಳಿತುಕೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಭಾಗಕ್ಕೆ ಎಸ್ ಪಿ ಅವರು ಮಹಿಳಾ ಪೊಲೀಸರನ್ನು ಒಳಗೊಂಡ ತಂಡವನ್ನು ಕಳುಹಿಸಿದ್ದಾರೆ.
ತನ್ನೊಂದಿಗೆ ಕೇವಲ ನಾಲ್ಕು ಮಂದಿಯನ್ನು ಮಾತ್ರ ಕರೆದುಕೊಂಡು ಹೋಗುತ್ತೇನೆ ಎಂದು ಹೇಳಿದರೂ ಇದಕ್ಕೆ ಜಿಲ್ಲಾಡಳಿತವು ಅವಕಾಶ ನೀಡಲಿಲ್ಲ ಎಂದು ಪ್ರಿಯಾಂಕಾ ಗಾಂಧಿ ಅವರು ತಿಳಿಸಿದರು.