ನವದೆಹಲಿ: ಏಕಾಂಗಿಯಾಗಿ ಹೋಗಿ ಕಾಡಿನಲ್ಲಿ ಕೆಲವು ದಿನ ಕಳೆಯುತ್ತಿದ್ದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನಿಜವಾಗಿಯೂ ಕಾಡಿಗೆ ಹೋಗಿದ್ದಾರೆ.
ಮೋದಿ ಅವರು ಡಿಸ್ಕವರಿ ಚಾನೆಲ್ ನ ಜನಪ್ರಿಯ ಕಾರ್ಯಕ್ರಮ ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ಕಾಣಸಿಗಲಿದ್ದಾರೆ.
ಈ ಕಾರ್ಯಕ್ರಮವು ಆಗಸ್ಟ್ 12ರಂದು ಪ್ರಸಾರವಾಗಲಿದೆ. ಮೋದಿ ಅವರಿಗೆ ಕಾಡಿನ ರೋಚಕ ಅನುಭವ ಇದಾಗಿದ್ದು, 180 ರಾಷ್ಟ್ರಗಳಲ್ಲಿ ಇದು ಪ್ರಸಾರವಾಗಲಿದೆ ಎಂದು ಚಾನೆಲ್ ಹೇಳಿದೆ.
ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್ ಅವರು ಈ ಬಗ್ಗೆ ಬರೆದುಕೊಂಡಿದ್ದಾರೆ. ಪ್ರಾಣಿ ಸಂಕುಲ ಮತ್ತು ಪರಿಸರ ಬದಲಾವಣೆ ಕುರಿತು ಅರಿವು ಮೂಡಿಸಲು ಪ್ರಯತ್ನಿಸಲಾಗಿದೆ ಎಂದು ಗ್ರಿಲ್ಸ್ ತಿಳಿಸಿದ್ದಾರೆ.