News Kannada
Monday, September 26 2022

ದೇಶ-ವಿದೇಶ

ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಿಸಿದ ಸಿಆರ್ ಪಿಎಫ್ ಯೋಧರು - 1 min read

Photo Credit :

ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯ ರಕ್ಷಿಸಿದ ಸಿಆರ್ ಪಿಎಫ್ ಯೋಧರು

ಜಮ್ಮುಕಾಶ್ಮೀರ: ನಿನ್ನೆ ರಾತ್ರಿ ನಡೆದ ಭೂಕುಸಿತದಿಂದ ಮಣ್ಣಿನಡಿ ಸಿಲುಕಿದ್ದ ವ್ಯಕ್ತಿಯೊಬ್ಬ ಪವಾಡಸದೃಶ್ಯ ಬದುಕುಳಿದಿರುವ ಘಟನೆಯು ಬುಧವಾರ ಜಮ್ಮುಕಾಶ್ಮೀರದ ರಂಬನ ಜಿಲ್ಲೆಯಲ್ಲಿ ನಡೆದಿದೆ.

ಮಣ್ಣಿನಲ್ಲಿ ಹುದುಗಿಹೋಗಿದ್ದ ಪ್ರದೀಪ್ ಕುಮಾರ್ ಎಂಬಾತನನ್ನು ಸೇನೆಯ ಜವಾನರು ರಕ್ಷಿಸಿದ್ದಾರೆ. ಲುದ್ವಾಲ್ ಗ್ರಾಮದ ಪ್ರದೀಪ್ ಕುಮಾರ್ ನಿನ್ನೆ ರಾತ್ರಿ ಮೆಹದ್ ಪ್ರದೇಶದಲ್ಲಿ ತೆರಳುತ್ತಿದ್ದ ವೇಳೆ ಮಣ್ಣು ಕುಸಿದಿದೆ. ಇದರಿಂದ ಪಾರಾಗಲು ಪ್ರಯತ್ನಿಸಿದರೂ ಹೊರಬರಲಾಗದೆ ಅಲ್ಲೇ ಹೂತು ಹೋಗಿದ್ದರು. ಇದು ನಿರ್ಜನ ಪ್ರದೇಶವಾಗಿದ್ದ ಕಾರಣದಿಂದಾಗಿ ಯಾರೂ ಇವರನ್ನು ನೋಡಿರಲಿಲ್ಲ. ಆದರೆ ಸಿಆರ್ ಪಿಎಫ್ ಜವಾನರು ದಿನನಿತ್ಯದಂತೆ ಇಲ್ಲಿ ಗಸ್ತು ತಿರುತ್ತಿದ್ದ ವೇಳೆ ಪ್ರದೀಪ್ ಕುಮಾರ್ ಮಣ್ಣಿನಲ್ಲಿ ಹೂತು ಹೋಗಿದ್ದನ್ನು ಕಂಡು ರಕ್ಷಿಸಿದ್ದಾರೆ.

ಬುಧವಾರ ಬೆಳಗ್ಗೆ ಸಿಆರ್ ಪಿಎಫ್ ನ 72ನೇ ಬ್ಯಾಟಲಿಯನ್ ನ ಯೋಧರು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಗಸ್ತು ತಿರುಗುತ್ತಿದ್ದ ವೇಳೆ ಅವರೊಂದಿಗಿದ್ದ ಶ್ವಾನ ಎಚ್ಚರಿಕೆ ನೀಡಿದ ಕಾರಣದಿಂದಾಗಿ ಸೈನಿಕರು ತೆರಳಿ ನೋಡಿದಾಗ ವ್ಯಕ್ತಿಯೊಬ್ಬ ಮಣ್ಣಿನಲ್ಲಿ ಸಿಲುಕಿರುವುದು ಕಂಡು ಬಂದಿದೆ.

ಪ್ರದೀಪ್ ಕುಮಾರ್ ನ್ನು ರಕ್ಷಿಸಿದ್ದರೂ ಅವರಿಗೆ ಆಘಾತದಿಂದ ಮಾತನಾಡಲು ಸಾಧ್ಯವಾಗುತ್ತಿಲ್ಲ ಎಂದು ಸಿಆರ್ ಪಿಎಫ್ ನವರು ತಿಳಿಸಿರುವರು.

See also  ದೇಶದಲ್ಲಿ ಒಂದೇ ದಿನದಲ್ಲಿ 52,050 ಹೊಸ ಕೋವಿಡ್-19 ಪ್ರಕರಣಗಳು ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು