News Kannada
Thursday, December 01 2022

ದೇಶ-ವಿದೇಶ

ಅವಳಿ ಮಕ್ಕಳಿಗೆ ಜನ್ಮ ನೀಡಿದ 74ರ ಹರೆಯದ ಮಹಿಳೆ! - 1 min read

Photo Credit :

ಅವಳಿ ಮಕ್ಕಳಿಗೆ ಜನ್ಮ ನೀಡಿದ 74ರ ಹರೆಯದ ಮಹಿಳೆ!

ಹೈದರಾಬಾದ್: ಆಂಧ್ರ ಪ್ರದೇಶದ ಗುಂಟೂರ್ ಜಿಲ್ಲೆಯಲ್ಲಿ 74 ಹರೆಯದ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆಯು ಗುರುವಾರ ನಡೆದಿದೆ.

ಎರ್ರಮಟ್ಟಿ ಮನಗಮ್ಮ ಮತ್ತು ಆಕೆಯ ಪತಿ ಎರ್ರಮಟ್ಟಿ ರಾಜ ರಾವ್(80) ಮೊದಲ ಬಾರಿಗೆ ತಂದೆ-ತಾಯಿಯಾಗಿದ್ದಾರೆ.

ಈ ದಂಪತಿ 1962ರ ಮಾರ್ಚ್ 22ರಂದು ಮದುವೆಯಾಗಿದ್ದರೂ ಮಕ್ಕಳಾಗಿರಲಿಲ್ಲ. ಇದಕ್ಕಾಗಿ ಹಲವಾರು ಮಂದಿ ವೈದ್ಯರು ಹಾಗೂ ಔಷಧಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 2018ರಲ್ಲಿ ಅವರು ಗುಂಟೂರಿನ ಅಹಲ್ಯ ನರ್ಸಿಂಗ್ ಹೋಮ್ ಗೆ ತೆರಳಿ ಡಾ. ಶಾನಕ್ಕಯಾಲ ಉಮಾಶಂಕರ್ ಅವರಿಂದ ಚಿಕಿತ್ಸೆ ಮಾಡಿಸಿಕೊಂಡಿದ್ದರು.

ಮಹಿಳೆಗೆ ರಕ್ತದೊತ್ತಡ, ಮಧುಮೇಹ ಮತ್ತು ಇತರ ಯಾವುದೇ ರೀತಿಯ ಸಮಸ್ಯೆಗಳು ಇಲ್ಲದೆ ಇದ್ದ ಕಾರಣದಿಂದಾಗಿ ಆಕೆ ಮಗುವಿಗೆ ಜನ್ಮ ನೀಡಲು ಸಾಧ್ಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಮಗುವಿಲ್ಲದ ಕಾರಣದಿಂದಾಗಿ ನಮ್ಮನ್ನು ಸಮಾಜದಲ್ಲಿ ಹೀಯಾಳಿಸಲಾಗುತ್ತಿತ್ತು. ಮದುವೆಯಿಂದ ಇದುವರೆಗೆ ನಮಗೆ ಹಲವಾರು ಅವಮಾನಗಳು ಆಗಿದೆ. ಆದರೆ ದೇವರು ನಮಗೆ ಕೃಪೆ ತೋರಲಿದ್ದಾನೆ ಎನ್ನುವ ಕಾರಣದಿಂದಾಗಿ ನಾವು ಪ್ರಯತ್ನ ಮಾಡುತ್ತಿದ್ದೆವು ಎಂದು ರಾಜ ರಾವ್ ಹೇಳಿದ್ದಾರೆ.

See also  ಮಸ್ಕಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಸಹೋದರ ಪೊಲೀಸ್ ವಶಕ್ಕೆ!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು