News Kannada
Wednesday, November 30 2022

ದೇಶ-ವಿದೇಶ

1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಿದ್ದ ಅಜ್ಜಿಗೆ ಎಲ್ ಪಿ ಜಿ ಸಂಪರ್ಕ - 1 min read

Photo Credit :

1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಿದ್ದ ಅಜ್ಜಿಗೆ ಎಲ್ ಪಿ ಜಿ ಸಂಪರ್ಕ

ತಮಿಳುನಾಡು: ಸೌದೆ ಒಲೆಯಲ್ಲಿ ಇಡ್ಲಿ ತಯಾರಿಸಿ 1 ರೂಪಾಯಿಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ 80ವರ್ಷದ ವೃದ್ಧೆಗೆ ಕೇಂದ್ರ ಸರ್ಕಾರ ಎಲ್ ಪಿಜಿ ಕನೆಕ್ಷನ್ ಮಾಡಿಕೊಟ್ಟಿದೆ.

ತಮಿಳುನಾಡಿನ ಕೊಯಂಬತ್ತೂರಿನಲ್ಲಿ ವಾಸವಾಗಿರುವ ಕೆ.ಕಮಲಥಾಲ್ ನಾಥ ಎಂಬ 80ವರ್ಷದ  ವೃದ್ಧೆ  ಪ್ರತಿನಿತ್ಯ 1000 ಇಡ್ಲಿಯನ್ನು ಮಾರಾಟ ಮಾಡಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಅದಲ್ಲದೆ ಬಡವರಿಗೂ ಹೊಟ್ಟೆ ತುಂಬಾ ಆಹಾರ ಹಾಕಬೇಕೆಂಬ ದೃಷ್ಟಿಯಲ್ಲಿ ಒಂದು ಇಡ್ಲಿಗೆ ಕೇವಲ 1 ರೂಪಾಯಿಯನ್ನು ಪಡೆಯುತ್ತಿದ್ದಾರೆ. ಇವರು ತಯಾರಿಸುವ ಇಡ್ಲಿ ತಿನ್ನಲು 2 ಕಿಲೋ ಮೀಟರ್ ದೂರದಿಂದಲೂ ಜನ ಬರುತ್ತಿದ್ದಾರೆ. ಈಚೆಗೆ ಅಜ್ಜಿ ಇಡ್ಲಿ ಮಾಡಿ ಉಣ ಬಡಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಈ ಸಂಬಂಧ ಟ್ವೀಟ್ ಮಾಡಿದ ಮಹೀಂದ್ರ ಗ್ರೂಫ್ ನ ಅಧ್ಯಕ್ಷ ಆನಂದ್ ಮಹೀಂದ್ರ, ಯಾವುದೇ ಫಲಾಪೇಕ್ಷವಿಲ್ಲದೆ ಕಮಲಥಾಲ್ ಅವರ ರೀತಿ ನಡೆದುಕೊಂಡು ಹೋಗಲು ಸಾಧ್ಯವೇ. ಅದಲ್ಲದೆ ಆಹಾರವನ್ನು ಸೌದೆ ಒಲೆಯಲ್ಲೇ ತಯಾರಿಸುತ್ತಿದ್ದಾರೆ. ಯಾರಿಗದರೂ ಇವರ ವಿಳಾಸ ತಿಳಿದಿದ್ದರೆ ಅವರಿಗೆ ಸಹಾಯ ಮಾಡಬಹುದಿತ್ತು ಎಂದು ಬರೆದುಕೊಂಡಿದ್ದಾರೆ.

ಈ ಟ್ವೀಟ್ ವೈರಲ್ ಆಗಿ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂಧ್ರ ಪ್ರಧಾನ್ ಅವರು ವೃದ್ಧೆಗೆ ಎಲ್ ಪಿಜಿ ಗ್ಯಾಸ್ ನ್ನು ವಿತರಿಸಿದ್ದಾರೆ.

ಧರ್ಮೇಂದ್ರ ಪ್ರಧಾನ್ ಟ್ವೀಟ್ ಮಾಡಿ, ‘ ಕಮಲಥಾಲ್ ಅವರ ಕೆಲಸದ ಮೇಲಿನ ನಿಷ್ಠೆಯನ್ನು ನೋಡಿದರೆ ಹೆಮ್ಮೆಯಾಗುತ್ತದೆ. ಅವರಿಗೊಂದು ಸೆಲ್ಯೂಟ್. ಸ್ಥಳೀಯ ನಾಯಕರ ಸಹಾಯದಿಂದ ಅವರಿಗೆ ಎಲ್ ಪಿಜಿ ಕನೆಕ್ಷ್ಯನ್ ನೀಡಲಾಗಿದೆ ಎಂದು ಬರೆದುಕೊಂಡಿದ್ದಾರೆ.

See also  ಅಮೆರಿಕದಲ್ಲಿ 5ರಿಂದ 11 ವರ್ಷದ ಮಕ್ಕಳಿಗೆ ಫೈಜರ್ ಲಸಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು