News Kannada
Friday, December 02 2022

ದೇಶ-ವಿದೇಶ

ಮಾಜಿ ಹಾಕಿ ಆಟಗಾರ ಸಂದೀಪ್ ಸಿಂಗ್, ಕುಸ್ತಿ ಪಟು ಯೋಗೇಶ್ವರ್ ದತ್ ಬಿಜೆಪಿಗೆ ಸೇರ್ಪಡೆ

Photo Credit :

ಮಾಜಿ ಹಾಕಿ ಆಟಗಾರ ಸಂದೀಪ್ ಸಿಂಗ್, ಕುಸ್ತಿ ಪಟು ಯೋಗೇಶ್ವರ್ ದತ್ ಬಿಜೆಪಿಗೆ ಸೇರ್ಪಡೆ

ಚಂಡೀಗಢ: ಭಾರತೀಯ ಹಾಕಿ ತಂಡದ ಮಾಜಿ ನಾಯಕ ಸಂದೀಪ್ ಸಿಂಗ್, ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಯೋಗೇಶ್ವರ್ ದತ್ ಮತ್ತು ಶಿರೋಮಣಿ ಅಕಾಲಿ ದಳ(ಎಸ್ ಎಡಿ) ಶಾಸಕ ಬಾಲಕೌರ್ ಸಿಂಗ್ ಅವರು ಗುರುವಾರ ಹರ್ಯಾಣದಲ್ಲಿ ಬಿಜೆಪಿಗೆ ಸೇರ್ಪಡೆಯಾದರು.

ಹರ್ಯಾಣ ಬಿಜೆಪಿ ಮುಖ್ಯಸ್ಥ ಸುಭಾಶ್ ಬರಾಲ ಅವರ ಸಮ್ಮುಖದಲ್ಲಿ ಈ ಮೂರು ಮಂದಿ ಇಂದು ಸಂಜೆ ನಾಲ್ಕು ಗಂಟೆಗೆ ಬಿಜೆಪಿಗೆ ಸೇರ್ಪಡೆಯಾದರು.

ಅ.21ರಂದು ನಡೆಯಲಿರುವ ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಸಂದೀಪ್ ಸಿಂಗ್ ಅವರು ಹರ್ಯಾಣದ ಪೆಹೊವಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆಯಿದೆ.

ಯೋಗೇಶ್ವರ್ ದತ್ ಅವರಿಗೆ ಬರೊದಾ ಕ್ಷೇತ್ರದಿಂದ ಟಿಕೆಟ್ ಸಿಗುವ ನಿರೀಕ್ಷೆಯಿದೆ. ಇದು ಯೋಗೇಶ್ವರ ದತ್ ಅವರ ತವರು ಜಿಲ್ಲೆಯಾಗಿದೆ.

ಸಂದೀಪ್ ಸಿಂಗ್ ಅವರು 2009ರಲ್ಲಿ ಭಾರತ ತಂಡಕ್ಕೆ ಸುಲ್ತಾನ್ ಅಜ್ಞಾನ್ ಶಾ ಕಪ್ ಗೆಲ್ಲಿಸಿಕೊಟ್ಟಿದ್ದರು. ಪೆನಾಲ್ಟಿ ಸ್ಪೆಷಲಿಸ್ಟ್ ಆಗಿದ್ದ ಸಂದೀಪ್ ಸಿಂಗ್ ಅವರು 2006ರ ಆಗಸ್ಟ್ 22ರಂದು ರೈಲಿನಲ್ಲಿ ರಾಷ್ಟ್ರೀಯ ತಂಡವನ್ನು ವಿಶ್ವಕಪ್ ಗಾಗಿ ಸೇರಿಕೊಳ್ಳಲು ತೆರಳುತ್ತಿದ್ದ ವೇಳೆ ರೈಲಿನಲ್ಲಿ ಆಕಸ್ಮಿಕವಾಗಿ ಸಿಡಿದ ಗುಂಡಿನಿಂದ ಗಾಯಗೊಂಡಿದ್ದರು. ಇದರ ಬಳಿಕ ಒಂದು ವರ್ಷ ಕಾಲ ಅವರು ವೀಲ್ಹ್ ಚೇರ್ ನಲ್ಲಿದ್ದರು. ಆದರೆ ಮತ್ತೆ ಮೈದಾನಕ್ಕಿಳಿದು 2010ರಲ್ಲಿ ವಿಶ್ವಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

See also  ಮಹಾರಾಷ್ಟ್ರ ಪ್ರವಾಹದಿಂದ ಗಗನಕ್ಕೇರಿದ ಟೊಮೆಟೋ-ಈರುಳ್ಳಿ ಬೆಲೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು