News Kannada
Monday, December 05 2022

ದೇಶ-ವಿದೇಶ

ರಾಮಜನ್ಮಭೂಮಿ ವಿವಾದ ವಿಚಾರಣೆ: ದಾಖಲೆ ಹರಿದು ಹಾಕಿದ ವಕೀಲ

Photo Credit :

ರಾಮಜನ್ಮಭೂಮಿ ವಿವಾದ ವಿಚಾರಣೆ: ದಾಖಲೆ ಹರಿದು ಹಾಕಿದ ವಕೀಲ

ನವದೆಹಲಿ: ರಾಮ ಜನ್ಮಭೂಮಿ ವಿವಾದ ವಿಚಾರದಲ್ಲಿ ನಡೆಯುತ್ತಿರುವ ವಿಚಾರಣೆಯ ಕೊನೆಯ ದಿನವಾದ ಬುಧವಾರ ಸುನ್ನಿ ವಕ್ಫ್ ಬೋರ್ಡ್ ನ ವಕೀಲ ರಾಜೀವ್ ಧವನ್ ಅವರು ಅಖಿಲ ಭಾರತದ ಹಿಂದೂ ಮಹಾಸಭಾದ ವಕೀಲ ವಿಕಾಸ್ ಸಿಂಗ್ ಅವರು ನೀಡಿದ ದಾಖಲೆ ಹಾಗೂ ನಕ್ಷೆಯನ್ನು ಹರಿದು ಹಾಕಿ ದೊಡ್ಡ ಮಟ್ಟದ ರಂಪಾಟ ನಡೆಸಿದರು.

ರಾಜೀವ್ ಧವನ್ ನಡವಳಿಕೆಯಿಂದ ಬೇಸತ್ತ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ(ಸಿಜೆಐ) ರಂಜನ್ ಗೊಗೊಯಿ ಅವರು ಹೀಗೆ ಮಾಡಿದರೆ ನಾವು ಇಲ್ಲಿಂದ ತೆರಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನ್ಯಾಯಾಲಯದ ನೀತಿಗೆ ಧಕ್ಕೆ ಬಂದಿದೆ. ಇಂತಹ ನಡವಳಿಕೆ ಮುಂದುವರಿದರೆ ಆಗ ನಾವು ಎದ್ದು ಅಲ್ಲಿಂದ ಹೋಗಿ ಬಿಡುತ್ತೇವೆ ಎಂದು ಅವರು ತಿಳಿಸಿದರು.

ಸಿಂಗ್ ಅವರು ಅಯೋಧ್ಯಾ ರಿವಿಸಿಟೆಡ್ ಎನ್ನುವ ಪುಸ್ತಕವನ್ನು ನ್ಯಾಯಾಧೀಶರ ಮುಂದಿಟ್ಟರು. ಇದಕ್ಕೆ ಆಕ್ಷೇಪ ವ್ಯಕ್ತ ಮಾಡಿದ ಧವನ್, ಕೆಲವು ಪುಟಗಳನ್ನು ಹರಿದು ಹಾಕಿದರು.

See also  ಚಿನ್ನದ ಗಣಿಯಲ್ಲಿ ದುರಂತ: 50ಕ್ಕೂ ಅಧಿಕ ಮಂದಿ ಜೀವಂತ ಸಮಾಧಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು