ನವದೆಹಲಿ: ಅರೇಬಿಯನ್ ಸಮುದ್ರದಲ್ಲಿ ಕ್ಯಾರ್ ಚಂಡಮಾರುತದಿಂದಾಗಿ ಭಾರೀ ಗಾಳಿಯೊಂದಿಗೆ ಮಳೆಯಾಗಲಿದೆ ಎಂದು ಗೋವಾ ಸರ್ಕಾರಕ್ಕೆ ಹವಾಮಾನ ಇಲಾಖೆಯು ಶುಕ್ರವಾರ ಮುನ್ನೆಚ್ಚರಿಕೆ ನೀಡಿದೆ.
ಗೋವಾ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಿರುವ ಕಾರಣದಿಂದಾಗಿ ಗೋವಾ ವಿಶ್ವವಿದ್ಯಾನಿಲಯದ ಶುಕ್ರವಾರ ಮತ್ತು ಶನಿವಾರ ನಡೆಯಲಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಗೋವಾ, ಕರ್ನಾಟಕದ ಕರಾವಳಿ ಭಾಗ ಮತ್ತು ದಕ್ಷಿಣ ಕೊಂಕಣ ಭಾಗದಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆಯು ತಿಳಿಸಿದೆ.