ಜಮ್ಮು-ಕಾಶ್ಮೀರ: ಪ್ರಧಾನಿ ನರೇಂದ್ರ ಮೋದಿ ಅವರು ದೀಪಾವಳಿ ಹಬ್ಬವನ್ನು ಭಾರತೀಯ ಸೇನೆ ಜತೆಗೆ ಭಾನುವಾರ ರಾಜೋರಿ ಜಿಲ್ಲೆಯಲ್ಲಿ ಆಚರಿಸಿದರು.
ಪ್ರಧಾನಿ ಮೋದಿ ಸೇನಾ ವಸ್ತ್ರದಲ್ಲಿ ಸೈನಿಕರಿಗೆ ಸಿಹಿ ತಿನ್ನಿಸಿ ಸಮಯ ಕಳೆದರು. ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಲೆಫ್ಟಿನೆಂಟ್ ಜನರಲ್ ರಣ್ ಬೀರ್ ಸಿಂಗ್ ಅವರು ಇದ್ದರು.
ಸೈನಿಕರ ಜತೆ ಕಳೆದ ಸಂತಸದ ಕ್ಷಣವನ್ನು ಪ್ರಧಾನಿ ಮೋದಿ ಸಾಮಾಜಿಕ ಜಾಲತಾನದಲ್ಲಿ ಹಂಚಿಕೊಂಡಿದ್ದಾರೆ.