ನವದೆಹಲಿ: ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ನಾಯಕ ಅಬುಬಕರ್ ಅಲ್ ಬಾಗ್ದಾದಿ ತನ್ನನ್ನೇ ತಾನು ಸ್ಫೋಟಿಸಿಕೊಂಡು ಸಾವಿಗೆ ಶರಣಾಗಿದ್ದಾನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ತಿಳಿಸಿದ್ದಾರೆ.
ಟ್ರಂಪ್ ಈ ಸಂಬಂಧ ಟ್ವೀಟ್ ಮಾಡಿ, ಭಾನುವಾರ ರಾತ್ರಿ ಅಮೆರಿಕ ಸೇನೆ ಜಗತ್ತಿನ ನಂ.1 ಉಗ್ರನನ್ನು ಬಲಿ ಪಡೆದಿದೆ. ಅಬು ಬಕರ್ ಅಲ್ ಬಾಗ್ದಾದಿ ಮೃತಪಟ್ಟ ವ್ಯಕ್ತಿ. ಬಾಗ್ದಾದಿ ಜಗತ್ತಿನ ಅತ್ಯಂತ ಕ್ರೂರ ನಿರ್ದಯಿ ಸಂಘಟನೆ ಐಎಸ್ ನ ಸಂಸ್ಥಾಪಕ. ಆತ ಅಮೆರಿಕ ಸೇನೆಯ ದಾಳಿಗೆ ಸಿಕ್ಕು ಒಂದು ನಾಯಿಯಂತೆ, ಹೇಡಿಯಂತೆ ಸತ್ತಿದ್ದಾನೆ ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.ಅಮೆರಿಕ ಸೇನೆ ದಾಳಿಗೆ ಯತ್ನಿಸುವ ವೇಳೆ ತಪ್ಪಿಸುವ ಕೊಳ್ಳುವ ಭರದಲ್ಲಿ ಕೊನೆಗೆ ತನ್ನನ್ನೇ ತಾನು ಸ್ಫೋಟಿಸಿಕೊಂಡ ಎಂದು ಹೇಳಿದ್ದಾರೆ. ಸ್ಫೋಟದ ತೀವ್ರತೆಗೆ ಆತನ ದೇಹ ಛಿದ್ರವಾಗಿದೆ.