ಚಿಕ್ಕಮಗಳೂರು: ಸೋಮವಾರ ಮಧ್ಯಾಹ್ನ ಕೇರಳದ ಪಾಲಕ್ಕಡ್ ನ ಅಗಳಿ ಪೊಲೀಸ್ ಠಾಣೆಯ ಪ್ರದೇಶದಲ್ಲಿ ನಕ್ಸಲ್ ನಿಗ್ರಹ ದಳವು ನಡೆಸಿದ ಗುಂಡಿನ ದಾಳಿಯಲ್ಲಿ ಚಿಕ್ಕಮಗಳೂರಿನ ಇಬ್ಬರು ನಕ್ಸಲರ ಸಹಿತ ಮೂರು ಮಂದಿಯನ್ನು ಎನ್ ಕೌಂಟರ್ ಮಾಡಲಾಗಿದೆ.
ಶೃಂಗೇರಿ ತಾಲೂಕಿನ ಬೆಳಗೋಡು ಕೂಡಿಗೆ ಶ್ರೀಮತಿ ಮತ್ತು ಮೂಡಿಗೆರೆ ತಾಲೂಕಿನ ಅಂಗಡಿಯ ಸುರೇಶ್ ಮೃತರು.
ಶ್ರೀಮತಿ 2008ರಲ್ಲಿ ನಕ್ಸಲರೊಂದಿಗೆ ಸೇರಿಕೊಂಡಿದ್ದರೆ, ಸುರೇಶ್ 2004ರಲ್ಲಿ ನಕ್ಸಲ್ ರೊಂದಿಗೆ ಸೇರಿದ್ದರು. ಇವರಿಬ್ಬರ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿವೆ.