ಶ್ರೀನಗರ: ಹೊರರಾಜ್ಯಗಳ ಐದು ಮಂದಿ ಕಾರ್ಮಿಕರನ್ನು ಜಮ್ಮುಕಾಶ್ಮೀರದಲ್ಲಿ ಉಗ್ರರು ಹತ್ಯೆ ಮಾಡಿರುವ ಘಟನೆಯು ಮಂಗಳವಾರ ನಡೆದಿದೆ.
ಮೃತರಲ್ಲಿ ಮೂವರನ್ನು ಶೇಖ್ ಕಮರುದ್ದೀನ್, ಶೇಖ್ ಮೊಹಮದ್ ರಫೀಕ್ ಮತ್ತು ಶೇಖ್ ಮುರ್ನ್ಸ್ ಎಂದು ಗುರುತಿಸಲಾಗಿದೆ. ಗಾಯಾಳು ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇವರು ಪಶ್ಚಿಮ ಬಂಗಾಳದ ಕೂಲಿ ಕಾರ್ಮಿಕರು ಎಂದು ತಿಳಿದುಬಂದಿದೆ. ಇವರೆಲ್ಲರೂ ಸ್ಥಳೀಯರೊಬ್ಬರ ಮನೆಯಲ್ಲಿ ವಾಸವಾಗಿದ್ದರು.