ನವದೆಹಲಿ: ಜಮ್ಮುಕಾಶ್ಮೀರದ ವಿಚಾರವು ಭಾರತದ ಆಂತರಿಕ ವಿಚಾರವಾಗಿದೆ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡಲು ಎಲ್ಲರೂ ಜತೆಗಿದ್ದೇವೆ ಎಂದು ಯುರೋಪಿಯನ್ ಯೂನಿಯನ್ ಪಾರ್ಲಿಮೆಂಟ್ ನ ಸಂಸದರು ಜಮ್ಮುಕಾಶ್ಮೀರ ಭೇಟಿ ಬಳಿಕ ತಿಳಿಸಿದರು.
23 ಮಂದಿಯ ಯುರೋಪಿಯನ್ ಯೂನಿಯನ್ ನ ಸಂಸದರು ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಭಯೋತ್ಪಾದನೆ ಎನ್ನುವುದು ಕೇವಲ ಭಾರತದ ಸಮಸ್ಯೆಯಲ್ಲ. ಇದು ಅಂತಾರಾಷ್ಟ್ರೀಯ ಸಮಸ್ಯೆಯಾಗಿದೆ. ಫ್ರಾನ್ಸ್ ಮತ್ತು ಯುರೋಪ್ ನಲ್ಲಿ ಕೂಡ ಭಯೋತ್ಪಾದನೆಯು ಸಮಸ್ಯೆಯಾಗಿದೆ ಎಂದು ಅವರು ಹೇಳಿದರು.
ಶ್ರೀನಗರದಲ್ಲಿ ನಾಲ್ಕು ಮಂದಿ ಸಂಸದರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.