ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ದೆರಾ ಸಚಾ ಸೌದದ ಮುಖ್ಯಸ್ಥ ಗುರ್ಮಿತ್ ರಾಮ್ ರಹಿಮ್ ಸಿಂಗ್ ನ್ನು ಬಂಧನದ ವೇಳೆ ಪಂಚಕುಲದಲ್ಲಿ ನಡೆಸಿದ ಹಿಂಸಾಚಾರಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಬಂಧನದಲ್ಲಿರುವ ರಾಮ್ ರಹಿಮ್ ದತ್ತು ಪುತ್ರಿ ಹನಿಪ್ರೀತ್ ಇನ್ಸಾನ್ ಗೆ ಜಾಮೀನು ಸಿಕ್ಕಿದೆ.
2017ರ ಆಗಸ್ಟ್ 28ರಂದು ಪಂಚಕುಲದಲ್ಲಿ ನಡೆದ ಹಿಂಸಾಚಾರದಲ್ಲಿ ಸುಮಾರು 30 ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದರು. ಹನಿಪ್ರೀತ್ ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರಾದರೆ, ಇತರ ಆರೋಪಿಗಳು ಕೋರ್ಟ್ ನಲ್ಲಿ ಉಪಸ್ಥಿತರಿದ್ದರು. ಮುಂದಿನ ವಿಚಾರಣೆಯು ನವಂಬರ್ 20ರಂದು ನಡೆಯಲಿದೆ.
ಹನಿಪ್ರೀತ್ ಮತ್ತು ದೆರಾದ ಇತರ ಕೆಲವು ಮಂದಿ ಬೆಂಬಲಿಗರ ವಿರುದ್ಧ ಹಿಂಸಾಚಾರ ಪ್ರಕರಣ ದಾಖಲಾಗಿತ್ತು. ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಸಂಜಯ್ ಸುಧೀರ್ ಅವರು ಜಾಮೀನು ಮಂಜೂರು ಮಾಡಿದರು.