News Kannada
Sunday, September 25 2022

ದೇಶ-ವಿದೇಶ

ರಾಮಜನ್ಮಭೂಮಿ-ಬಾಬರಿ ವಿವಾದ: ಸುಪ್ರೀಂ ತೀರ್ಪಿನ ಬಗ್ಗೆ ಓವೈಸಿ ಅತೃಪ್ತಿ - 1 min read

Photo Credit :

ರಾಮಜನ್ಮಭೂಮಿ-ಬಾಬರಿ ವಿವಾದ: ಸುಪ್ರೀಂ ತೀರ್ಪಿನ ಬಗ್ಗೆ ಓವೈಸಿ ಅತೃಪ್ತಿ

ನವದೆಹಲಿ: ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಎಐಎಂಐಎಂ ಮುಖ್ಯಸ್ಥ ಅಸುದ್ದೀನ್ ಓವೈಸಿ ಅವರು ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಈ ತೀರ್ಪು ಮುಸ್ಲಿಮರ ಜತೆಗೆ ತಾರತಮ್ಯ ಮಾಡಿದಂತಾಗಿದೆ. ಸುಪ್ರೀಂಕೋರ್ಟ್ ತೀರ್ಪು ಅಂತಿಮ. ಆದರೆ ದೋಷಾತೀತವಲ್ಲ. ನನಗೆ ಈ ತೀರ್ಪಿನಿಂದ ತೃಪ್ತಿಯಾಗಿಲ್ಲ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯಂತೆ ನನಗೆ ಕೂಡ ಸಂತೋಷವಾಗಿಲ್ಲ. ಮಸೀದಿ ಜಾಗವನ್ನು ನಾವು ಮಾರಲು ಸಾಧ್ಯವಿಲ್ಲ ಮತ್ತು ಇದು ವೈಯಕ್ತಿಕ ಆಸ್ತಿಯಲ್ಲ. ಈ ತೀರ್ಪಿನ ಬಗ್ಗೆ ಎಐಎಂಪಿಎಲ್ ಬಿ ತೆಗೆದುಕೊಳ್ಳುವ ತೀರ್ಪಿನ ಪರವಾಗಿ ನಾನಿರುತ್ತೇನೆ. ಇದರ ಬಗ್ಗೆ ಎಐಎಂಪಿಎಲ್ ಬಿ ಸಭೆ ನಡೆಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿದೆ ಎಂದರು.

ಮಸೀದಿ ನಿರ್ಮಾಣಕ್ಕೆ ನೀಡಿರುವಂತಹ ಐದು ಎಕ್ರೆ ಜಮೀನನ್ನು ತಿರಸ್ಕರಿಸಲು ಅವರು ಕರೆ ನೀಡಿದರು. ಕಾನೂನಿನ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ನಮಗೆ ಐದು ಎಕ್ರೆ ಜಾಗ ಯಾರಿಂದಲೂ ದಾನವಾಗಿ ಬೇಕಿಲ್ಲ. ಅಲ್ಲಾನಿಗಾಗಿ ಮುಸ್ಲಿಮರು ಐದು ಎಕ್ರೆ ಜಮೀನು ಖರೀದಿಸಲು ಆಗದೆ ಎಂದು ಅವರು ಪ್ರಶ್ನಿಸಿದರು.

See also  ಕಠುವಾ ಅತ್ಯಾಚಾರ ಪ್ರಕರಣ: ಆರು ಮಂದಿ ಆರೋಪಿಗಳು ದೋಷಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು