ನವದೆಹಲಿ: ಮುಸ್ಲಿಮರು ದೇಶದೆಲ್ಲೆಡೆಯಲ್ಲಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಈದ್ ಮಿಲಾದ್ ಹಬ್ಬಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಶುಭ ಕೋರಿವರು.
ಈದ್ ಹಬ್ಬದ ಶುಭಾಶಯಗಳು. ಪ್ರವಾದಿ ಮುಹಮ್ಮದರಿಂದ ಪ್ರಭಾವಿತರಾಗಿದ್ದೇನೆ. ಸಮಾಜದಲ್ಲಿ ಸಾಮರಸ್ಯ ಮತ್ತು ಸಹಾನುಭೂತಿಯು ಇನ್ನಷ್ಟು ಹೆಚ್ಚಲಿ, ಶಾಂತಿ ನೆಲೆಸಲು ಎಂದು ಮೋದಿ ಅವರು ಟ್ವೀಟ್ ಮಾಡಿರುವರು.
ಎಲ್ಲಾ ದೇಶವಾಸಿಗಳಿಗೆ, ದೇಶವಿದೇಶಗಳಲ್ಲಿ ನೆಲೆಸಿರುವ ಮುಸ್ಲಿಮ್ ಸಹೋದರ-ಸೋದರಿಯರಿಗೆ ಪ್ರವಾದಿ ಮುಹಮ್ಮದರ ಜನ್ಮದಿನದ ಹಬ್ಬ ಈದ್ ಮಿಲಾದ್ ಶುಭಾಗಳು ಎಂದು ರಾಷ್ಟ್ರಪತಿ ಅವರು ಟ್ವೀಟ್ ಮಾಡಿರುವರು.