ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ರೈಲು ಸೇವೆ ಪುನರಾರಂಭ ಮಾಡುವ ಸಲುವಾಗಿ ಸೋಮವಾರ ಭಾರತೀಯ ರೈಲ್ವೆ ಇಲಾಖೆಯು ಶ್ರೀನಗರ ಮತ್ತು ಬಾರಾಮುಲ್ಲಾ ಮಧ್ಯೆ ಪರೀಕ್ಷಾರ್ಥ ರೈಲು ಓಡಾಟ ನಡೆಸಿತು.
ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಇಲ್ಲಿ ರೈಲು ಸೇವೆ ನಿಲ್ಲಿಸಲಾಗಿತ್ತು. ಪರೀಕ್ಷಾರ್ಥ ಓಡಾಟ ವೇಳೆ ಭದ್ರತಾ ಸಿಬ್ಬಂದಿ ಹಾಗೂ ರೈಲ್ವೆ ಅಧಿಕಾರಿಗಳು ಉಪಸ್ಥಿತರಿದ್ದರು.
ಮೂರು ತಿಂಗಳಿಂದ ರೈಲು ಸೇವೆಯು ನಿಲ್ಲಿಸಿದ್ದ ಪರಿಣಾಮವಾಗಿ ಇಲ್ಲಿನ ಜನರಿಗೆ ತೊಂದರೆಯಾಗಿತ್ತು. ಮತ್ತೆ ರೈಲು ಸೇವೆ ಆರಂಭಿಸಲು ಪರೀಕ್ಷಾರ್ಥ ರೈಲು ಓಡಿಸಿದೆ.