ನ್ಯೂಯಾರ್ಕ್: ಬಾಲಿವುಡ್ ನ ಖ್ಯಾತ ನಟ ಹೃತಿಕ್ ರೋಷನ್ ಮೇಲೆ ಕೃಷ್ ಹೊಂದಿದ್ದ ಪತ್ನಿಯನ್ನು ಹತ್ಯೆ ಮಾಡಿ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯು ಅಮೆರಿಕಾದ ನ್ಯೂಯಾರ್ಕ್ ನಲ್ಲಿ ನಡೆದಿದೆ.
ಭಾರತ ಮೂಲದ ಮಹಿಳೆ ಡೋನೆ ದೊಜೋಯ್(27) ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದ ಭಾರತದ ದಿನೇಶ್ವರ ಬುದ್ದಿದತ್ತ್ ಎಂಬಾತನೇ ಈ ಕೃತವೆಸಗಿರುವಾತ. ದೊಜೋಯ್ ಕೊಲೆಗೈದ ದಿನೇಶ್ವರ ಬುದ್ದಿದತ್ ತಾನೂ ಕೂಡ ಆತ್ಮಹತ್ಯೆ ಮಾಡಿದ್ದಾನೆ.
ಕಹೋ ನ ಪ್ಯಾರ್ ಹೈ ಚಿತ್ರದ ಬಳಿಕ ಹೃತಿಕ್ ರೋಷನ್ ಬಗ್ಗೆ ದೊಜೋಯ್ ಆಕರ್ಷಿತರಾಗಿದ್ದರು. ಇದರ ಬಳಿಕ ಹೃತಿಕ್ ಪ್ರತಿಯೊಂದು ಸಿನಿಮಾವನ್ನು ಬಿಡದೆ ನೋಡುತ್ತಲಿದ್ದರು. ಇದರಿಂದ ಪತಿಗೆ ಅಸೂಯೆಯಾಗುತ್ತಿತ್ತು ಎಂದು ಹೇಳಲಾಗಿದೆ.