ಶ್ರೀನಗರ: ಸೇನಾ ಪಡೆಯು ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರು ಉಗ್ರರು ಹತ್ಯೆಯಾಗಿರುವ ಘಟನೆಯು ಜಮ್ಮು ಕಾಶ್ಮೀರದ ಬಂಡಿಪೊರಾದಲ್ಲಿ ನಡೆದಿದೆ.
ಭಾನುವಾರ ನಡೆಸಿದ ಎನ್ ಕೌಂಟರ್ ನಲ್ಲಿ ಇಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಕಾಶ್ಮೀರ ಪೊಲೀಸರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವರು.
ಈ ಭಾಗದಲ್ಲಿ ಇನ್ನು ಕೂಡ ಉಗ್ರರಿಗಾಗಿ ಶೋಧ ಕಾರ್ಯವು ಮುಂದುವರಿದಿದೆ. ಸೇನೆ ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿರುವರು. ಎನ್ ಕೌಂಟರ್ ನಡೆದ ಜಾಗದಿಂದ ಶವವನ್ನು ತೆಗೆಯಲಾಗಿದೆ. ಉಗ್ರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಜಮ್ಮುಕಾಶ್ಮೀರ ಪೊಲೀಸರು ಹೇಳಿರುವರು.