ನವದೆಹಲಿ: ಜವಾಹರ ಲಾಲ್ ನೆಹರೂ ಯೂನಿವರ್ಸಿಟಿ(ಜೆಎನ್ ಯು)ಯಲ್ಲಿ ದುಷ್ಕರ್ಮಿಗಳಿಂದ ಹಾನಿಗೀಡಾಗಿರುವ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಗುರುವಾರ ಮರು ಸ್ಥಾಪಿಸಲಾಗಿದೆ.
ಜೆಎನ್ ಯುನ ವಿದ್ಯಾರ್ಥಿ ಸಂಘದ ಹೇಳಿಕೆ ಪ್ರಕಾರ ಪ್ರಸಕ್ತ ಶುಲ್ಕ ಹೇರಿಕೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಗಮನ ಬೇರೆಡೆ ಸೆಳೆಯುವ ಸಲುವಾಗಿ ಪ್ರತಿಮೆಗೆ ಹಾನಿ ಮಾಡಲಾಗಿದೆ.
ಶುಲ್ಕ ಹೇರಿಕೆ ಮತ್ತು ಹಾಸ್ಟೆಲ್ ಕೈಪಿಡಿ ಕರಡು ರಚಿಸುವ ವೇಳೆ ತಮ್ಮೊಂದಿಗೆ ಚರ್ಚೆ ಮಾಡಿಲ್ಲ ಎಂದು ನಡೆಸುತ್ತಿರುವಂತಹ ಪ್ರತಿಭಟನೆಯು ಶಾಂತಿಯುತವಾಗಿ ನಡೆಯುತ್ತಲಿದೆ ಮತ್ತು ಗಮನ ಬೇರೆಡೆ ಸೆಳೆಯುವ ಸಲುವಾಗಿ ಪ್ರತಿಮೆಗೆ ಹಾನಿ ಮಾಡಲಾಗಿದೆ ಎಂದು ಜೆಎನ್ ಯು ವಿದ್ಯಾರ್ಥಿ ಸಂಘಟನೆ ತಿಳಿಸಿದೆ.