ತಿರುವನಂತಪುರಂ: ಮಂಡಲಕಲ ಋತುವಿಗಾಗಿ ಇಂದು ಶಬರಿಮಲೆಯ ಅಯ್ಯಪ್ಪ ದೇವಾಲಯವು ಇಂದು ತೆರೆಯುತ್ತಲಿದ್ದು, ದೇವಸ್ಥಾನದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಎಲ್ಲಾ ವಯಸ್ಸಿನ ಮಹಿಳೆಯರಿಗೆ ಮಂದಿರ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್ ಕಳೆದ ವರ್ಷ ತೀರ್ಪು ನೀಡಿದ ಬಳಿಕ ಇಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ. ಈ ವಾರದಲ್ಲಿ ತೀರ್ಪಿನ ಮರು ಪರಿಶೀಲನೆ ತೀರ್ಪು ನೀಡಲು ಐದು ಸದಸ್ಯರ ನ್ಯಾಯಪೀಠವು ವಿಫಲವಾಗಿ, ಇದನ್ನು ಏಳು ಸದಸ್ಯರ ನ್ಯಾಯಪೀಠಕ್ಕೆ ವರ್ಗಾಯಿಸಿದೆ.
ಕೇರಳ ಸರ್ಕಾರವು ಇಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಿದೆ. ಆದರೆ ಮಹಿಳೆಯರಿಗೆ ಯಾವುದೇ ವಿಶೇಷ ಭದ್ರತೆಯನ್ನು ಏರ್ಪಡಿಸಲಾಗಿಲ್ಲ ಎಂದು ಹೇಳಲಾಗಿದೆ.
ಸುಮಾರು 10 ಸಾವಿರ ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.